ಮೈಸೂರಿನಲ್ಲಿ ಏಪ್ರಿಲ್‌ 6ರಿಂದ ಎರಡು ದಿನಗಳ ಸಮಾವೇಶ ‘ವೇದ ನಮನ’

ಮೈಸೂರು: ಕೆ.ಆರ್‌. ನಗರದಲ್ಲಿ ಏಪ್ರಿಲ್‌ 6 ಮತ್ತು 7ರಂದು ರಾಜ್ಯ ಮಟ್ಟದ ವೇದ ವಿದ್ವಾಂಸರ ಸಮ್ಮೇಳನ ವೇದ ನಮನ ನಡೆಯಲಿದೆ.

ನಗರದ ಯೋಗಾನಂದೇಶ್ವರ ಸರಸ್ವತಿ ಮಠದಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ರಾಜ್ಯದ ಹೆಸರಾಂತ ವೇದ ವಿದ್ವಾಂಸರು ಈ ಸಮ್ಮೇಳನದಲ್ಲಿ ಭಾಗವಹಿಸುವರು. ಏ. 6ರಂದು ಬೆಳಗ್ಗೆ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಲ್ಪ ಸಂಖ್ಯಾತ ವಿಭಾಗದ ಭಾಷಾ ವಿಭಾಗದ ನಿರ್ದೇಶಕ ಜಿ.ಆರ್‌. ಪಾಟೀಲ್‌ ಸಮ್ಮೇಳನವನ್ನು ಉದ್ಘಾಟಿಸುವರು. ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನ ಆರಂಭವಾಗಲಿದೆ. ಸಂಜೆ ಶೃಂಗೇರಿ ಜಗದ್ಗುರುಗಳ ಸ್ವಾಗತ ಸಮಾರಂಭವನ್ನೂ ಆಯೋಜಿಸಲಾಗಿದೆ.

ಏಪ್ರಿಲ್‌ 7ರಂದು ಬೆಳಗ್ಗೆ ಗೋಷ್ಠಿಗಳು ಹಾಗೂ ಯೋಗಾನಂದೇಶ್ವರ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಮ್ಮೇಳನ ಆಯೋಜಕರ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+