ರಾಮಸೇವಕರ ಹತ್ಯೆ ಖಂಡಿಸಿ ಭಾನುವಾರ ಬೆಂಗ್ಳೂರಲ್ಲಿ ಬೃಹತ್ ಸಭೆ
ಬೆಂಗಳೂರು : ಗೋಧ್ರಾದಲ್ಲಿ ನಡೆದ ರಾಮಸೇವಕರ ನರಮೇಧವನ್ನು ಖಂಡಿಸಿ, ಭಾನುವಾರ ಬೆಂಗಳೂರಿನ ಮಲ್ಲೇಶ್ವರ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ರಾಜ್ಯ ವಿಶ್ವಹಿಂದೂ ಪರಿಷತ್ ಪ್ರಕಟಿಸಿದೆ. ಈ ವಿಷಯವನ್ನು ಪರಿಷತ್‌ನ ಕ್ಷೇತ್ರೀಯ ಕಾರ್ಯದರ್ಶಿ ಬಿ.ಎನ್. ಮೂರ್ತಿ ತಿಳಿಸಿದ್ದಾರೆ.
ಈ ಮೆರವಣಿಗೆಯಲ್ಲಿ ಪೇಜಾವರ ಮಠಾಧೀಶರೂ ಸೇರಿದಂತೆ ಹಲವು ಮಠಾಧಿಪತಿಗಳು, ಲಕ್ಷಾಂತರ ಕಾರ್ಯಕರ್ತರು, ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಯಾರು ಏನು ಮಾಡುತ್ತಾರೋ ಮಾಡಲಿ, ರಾಮಸೇವಕರು ಮಾತ್ರ ಆಯೋಧ್ಯೆಗೆ ಹೋಗೇ ಹೋಗುತ್ತಾರೆಂದ ಅವರು, ಈಗಾಗಲೇ ರಾಜ್ಯದ 500 ರಾಮಸೇವಕರು ಆಯೋಧ್ಯೆ ತಲುಪಿದ್ದಾರೆ ಎಂದರು.
ಮಾರ್ಚ್ 14 ಮತ್ತು 15ರಂದು ಅಯೋಧ್ಯೆಯಲ್ಲಿ ನಡೆಯುವ ಪೂರ್ಣಾಹುತಿ ಯಜ್ಞದಲ್ಲಿ ಭಾಗವಹಿಸಲು ರಾಜ್ಯದಿಂದ 45 ಸಾವಿರ ರಾಮಸೇವಕರು ತೆರಳುತ್ತಿದ್ದು, ಇವರು ಯಾವುದೇ ಪರಿಣಾಮ ಎದುರಿಸಲೂ ಸಿದ್ಧರಾಗಿದ್ದಾರೆ ಎಂದೂ ಮೂರ್ತಿ ಹೇಳಿದರು. ರಾಜ್ಯದ 300 ಸ್ಥಳಗಳಲ್ಲಿ ಜಪ ಯಜ್ಞ ನಡೆದಿದೆ. 6 ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಪಾಲ್ಗೊಂಡಿದ್ದರು ಎಂದು ಅವರು ವಿವರಿಸಿದರು.
(ಇನ್‌ಫೋವಾರ್ತೆ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications