ಮಹಾರಾಷ್ಟ್ರ: ಬಂದ್‌ಗೆ ಶಿವಸೇನೆ, ಬಿಜೆಪಿ, ಆರೆಸ್ಸೆಸ್ ಬೆಂಬಲ
ಮುಂಬಯಿ : ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಬಂದ್ ಮಹಾರಾಷ್ಟ್ರಾದ್ಯಂತ ಶುಕ್ರವಾರ ಮುಂಜಾನೆ 6 ಗಂಟೆಯಿಂದಲೇ ಪ್ರಾರಂಭವಾಗಿದೆ. ಮುಂಬಯಿಯಲ್ಲಿ ವಾಹನಗಳ ಸಂಚಾರ ಅತ್ಯಂತ ಕಡಿಮೆಯಿದೆ.
ಪೊಲೀಸ್ ಹೆಡ್‌ಕ್ವಾರ್ಟಸ್‌ನ ವಕ್ತಾರರೊಬ್ಬರ ಪ್ರಕಾರ ರಾಜ್ಯಾದ್ಯಂತ ಕ್ಷಿಪ್ರ ಕಾರ್ಯ ಪಡೆ (ಆರ್‌ಎಎಫ್), ಧ್ವಂಸ ನಿಯಂತ್ರಕ ಪಡೆ ಹಾಗೂ ರಾಜ್ಯ ರಿಸರ್ವ್ ಪೊಲೀಸ್ ಪಡೆ (ಎಸ್‌ಆರ್‌ಪಿಎಫ್), ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ತೊಡಗಿವೆ. ಈವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಛಗನ್ ಭುಜಬಲ್ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ, ಭಾರತೀಯ ಮಜ್ದೂರ್ ಸಂಘ, ಆರ್‌ಎಸ್‌ಎಸ್, ಶಿವಸೇನೆ ಹಾಗೂ ಕೆಲವು ವಾಣಿಜ್ಯ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಿವೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications