ಬೆಂಗಳೂರಲ್ಲಿ ವಿಮಾನ ಹೈಜಾಕ್ ಬೆದರಿಕೆ : ನಿಲ್ದಾಣದಲ್ಲಿ ಬಿಗಿ ಭದ್ರತೆ
ಬೆಂಗಳೂರು : ವಿಮಾನ ಅಪಹರಣ ಬೆದರಿಕೆ ಹಿನ್ನೆಲೆಯಲ್ಲಿ ನಗರದ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಗುರುವಾರ ರಾತ್ರಿ ಬೆಂಗಳೂರಿನಿಂದ 11.15ಕ್ಕೆ ವಿದೇಶಕ್ಕೆ ಹೊರಡುವ ವಿಮಾನವನ್ನು ಅಪಹರಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಯಾಬ್ಬರಿಗೆ ಬುಧವಾರ ಫ್ಯಾಕ್ಸ್ ಸಂದೇಶವೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತಾ ಪಹರೆ ಹಾಕಲಾಗಿದೆ. ಗುರುವಾರ ವಿಮಾನವನ್ನು ಹೈಜಾಕ್ ಮಾಡುವುದಾಗಿ ಕಳುಹಿಸಿರುವ ಬೆದರಿಕೆ ಸಂದೇಶದಲ್ಲಿ ಪಾಸ್‌ಪೋರ್ಟ್ ನಂಬರ್ ಕೂಡ ಇದ್ದು, ಅದು ಯಾರದು ಎಂಬುದು ಪೊಲೀಸರಿಗೆ ತಿಳಿದಿದೆ.
ವಿಷಯ ತನಿಖೆ ಹಂತದಲ್ಲಿ ಇರುವುದರಿಂದ ಹೆಚ್ಚು ವಿವರಣೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಶುಕ್ರವಾರ ಕೂಡ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ತೀವ್ರ ನಿಗಾ ಇರಿಸಲಾಗಿದೆ. ಉನ್ನತ ಮೂಲಗಳ ಪ್ರಕಾರ ಈ ವಿಮಾನ ಅಪಹರಣ ಬೆದರಿಕೆ ಕೇವಲ ಹುಡುಗಾಟಿಕೆಯಾಗಿದೆ!
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications