ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಹಂಪಿ ಅಭಿವೃದ್ಧಿ - ಸಿನ್ಹಾ
ನವದೆಹಲಿ : ಅಂತರರಾಷ್ಟ್ರೀಯ ಖ್ಯಾತಿಯ ಪ್ರವಾಸಿ ಕೇಂದ್ರವನ್ನಾಗಿ ಕರ್ನಾಟಕದ ಹಂಪಿಯನ್ನು ರೂಪಿಸಲು ಸಮಗ್ರ ಯೋಜನೆಯಾಂದನ್ನು ಹಮ್ಮಿಕೊಳ್ಳುವುದಾಗಿ ವಿತ್ತ ಸಚಿವ ಯಶವಂತ ಸಿನ್ಹಾ ತಮ್ಮ 2002-03 ನೇ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ವಿಶ್ವ ಪರಂಪರೆಯ ಪ್ರವಾಸಿ ಸ್ಥಳವಾಗಿರುವ ಹಂಪಿಯ ಸಮಗ್ರ ಅಭಿವೃದ್ಧಿಯನ್ನು ವಿಶೇಷ ಅಭಿವೃದ್ಧಿಯಡಿ ಕೈಗೆತ್ತಿಕೊಳ್ಳಲಾಗುವುದು ಎಂದು ಗುರುವಾರ ತಮ್ಮ ಮುಂಡಗ ಪತ್ರ ಮಂಡನೆ ಭಾಷಣದಲ್ಲಿ , ಪ್ರವಾಸೋದ್ಯಮ ಇಲಾಖೆಯ ಯೋಜನೆಗಳ ವಿವರ ನೀಡಿದ ಸಿನ್ಹಾ ತಿಳಿಸಿದರು.
ಹಂಪಿಯ ಅಭಿವೃದ್ಧಿಯ ಬಗೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್ ಅವರಿಗೆ ವಿಶೇಷ ಆಸಕ್ತಿಯಿದೆ. ಇತ್ತೀಚೆಗಷ್ಟೇ ಅವರು ಖುದ್ದು ಹಂಪಿಗೆ ಭೇಟಿ ನೀಡಿದ್ದರು. ಹಂಪಿ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವ ಕುರಿತು ಜಗಮೋಹನ್ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ರೋಷನ್ ಬೇಗ್ ಅವರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಸಿನ್ಹಾ ಹೇಳಿದರು.
(ಇನ್ಫೋ ವಾರ್ತೆ)











Click it and Unblock the Notifications