200 ದಾಟಿದ ಸತ್ತವರ ಸಂಖ್ಯೆ: ಅಹಮದಾಬಾದ್‌ನಲ್ಲಿ ಕಂಡಲ್ಲಿ ಗುಂಡು

ಅಹಮದಾಬಾದ್‌ : ವ್ಯಾಪಕ ಹಿಂಸಾಚಾರದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳಿಗೆ ಕಂಡಲ್ಲಿ ಗುಂಡಿಕ್ಕುವಂತೆ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ.

ಅಹಮದಾಬಾದ್‌ನ ನರೋಡ ಬಳಿ ಹಿಂಸಾಚಾರಕ್ಕೆ 50 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಗುಜರಾತ್‌ನಲ್ಲಿ ಈವರೆಗೂ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 200 ದಾಟಿದೆ. ಅಹಮದಾಬಾದ್‌ನ ಪ್ರಮುಖ ರಸ್ತೆಗಳೆಲ್ಲ ಕಾಳಗದ ಕಣಗಳಾಗಿದ್ದು, 100 ಕ್ಕೂ ಹೆಚ್ಚು ಜನ ನಗರವೊಂದರಲ್ಲೇ ಬಲಿಯಾಗಿದ್ದಾರೆ.

ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪೊಲೀಸರು ಮೂಕ ಪ್ರೇಕ್ಷಕರಾಗಿರುವ ಪರಿಸ್ಥಿತಿ ಉಂಟಾಗಿದೆ. ಕೆಲವು ರಸ್ತೆಗಳನ್ನು ದಾಳಿಕೋರರು ಮುಚ್ಚಿದ್ದರೆ, ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಾಳಿಕೋರರ ಎದುರು ಪೊಲೀಸರು ನಿಸ್ಸಹಾಯಕರಾಗಿದ್ದಾರೆ.

ಎಂಟು ಜನರ ಕುಟುಂಬ ಸಜೀವ ದಹನ : ಅಹಮದಾಬಾದ್‌ ಸಮೀಪ ಟಾಟಾ ಸುಮೊ ಒಂದಕ್ಕೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದು, ವಾಹನದಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಸುಮೊ ಸಮೇತ ಸುಟ್ಟು ಹೋಗಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+