ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಒತ್ತು : ಕೃಷ್ಣ ಆಶಯ
ಬೆಂಗಳೂರು : ರಾಜ್ಯಗಳಿಗೆ ಕೇಂದ್ರ ನೀಡುವ ಆರ್ಥಿಕ ಅನುದಾನ ಕಡಿತ ಮಾಡಿರುವುದರಿಂದ ರಾಜ್ಯಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹ ಅವರು, ಗುರುವಾರ ಕೇಂದ್ರ ಬಜೆಟ್ ಮಂಡಿಸುವರೆಂಬ ಆಶಾಭಾವನೆಯನ್ನು ಮುಖ್ಯಮಂತ್ರಿ ಕೃಷ್ಣ ವ್ಯಕ್ತಪಡಿಸಿದ್ದಾರೆ.
ಉದ್ದೇಶಿತ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 500 ಮೆಗಾವ್ಯಾಟ್ ವಿದ್ಯುತ್ ಖರೀದಿಯ ಮೊದಲ ಹಂತದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು, ಕೇಂದ್ರ ಸರಕಾರ ಕಡ್ಡಾಯವಾಗಿ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರಗಳಿಗೆ ನೀಡುವ ಅನುದಾನ ಕಡಿತ ಮಾಡಿರುವುದನ್ನು 2002-03ನೇ ಸಾಲಿನ ಬಜೆಟ್‌ನಲ್ಲಿ ಸಿನ್ಹ ಹೇಗೆ ನಿಬಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯಗಳ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಗಮನ ಹರಿಸುವುದು ಅನಿವಾರ್ಯ ಎಂದು ಕೃಷ್ಣ ಹೇಳಿದರು.
ವಿದ್ಯುತ್ ಸುಧಾರಣೆ ಕ್ರಮ : ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಮತ ಮೂಡಿದಾಗ ಮಾತ್ರ ವಿದ್ಯುತ್ ಕ್ಷೇತ್ರದಲ್ಲಿನ ಸುಧಾರಣೆ ಕ್ರಮಗಳಿಗೆ ಆಗುತ್ತಿರುವ ಅಡ್ಡಿ-ಆತಂಕಗಳನ್ನು ತಪ್ಪಿಸಲು ಸಾಧ್ಯ ಎಂದು ಅವರು ಹೇಳಿದರು. ವಿದ್ಯುತ್ ವಲಯ ಒಂದು ಸಮಸ್ಯಾತ್ಮಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಕೈಗೊಳ್ಳುವ ಸುಧಾರಣೆ ಕ್ರಮಗಳಿಗೆ ಅಡ್ಡಿ- ಅಡಚಣೆ ಇದ್ದೇ ಇರುತ್ತದೆ. ಇದನ್ನು ಸಂಘಟಿತ ಪ್ರಯತ್ನ ಹಾಗೂ ರಾಷ್ಟ್ರೀಯ ಸಹಮತದಿಂದ ಮಾತ್ರ ತಡೆಯಬಹುದು ಎಂದರು.
(ಇನ್‌ಫೋ ವಾರ್ತೆ)ಮುಖಪುಟ / ಕೃಷ್ಣಗಾರುಡಿ












Click it and Unblock the Notifications