ನೈತಿಕ ಹೊಣೆ ಹೊತ್ತು ಎಸ್‌.ಎಂ.ಕೃಷ್ಣ ರಾಜೀನಾಮೆ ಕೊಡಲಿ : ದಳ

ಬೆಂಗಳೂರು : ಜನಾಭಿಪ್ರಾಯ ಸರ್ಕಾರದ ವಿರುದ್ಧವಾಗಿದೆ. ಈ ಕಾರಣಕ್ಕೇ ದೇವೇಗೌಡರನ್ನು ಗೆಲ್ಲಿಸಿರುವುದು. ತಮ್ಮ ವೈಫಲ್ಯವನ್ನು ಮನಗಂಡು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಉಭಯ ಜನತಾ ದಳಗಳ ಮುಖಂಡರು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದ ದಳ ಮುಖಂಡರು, ದೇವೇಗೌಡರ ಗೆಲುವು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಚುನಾವಣೆ ಸಮಯದಲ್ಲಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಮತ ಕೀಳುವ ಕಾಂಗ್ರೆಸ್‌ ತಂತ್ರಕ್ಕೆ ಜನ ಸರಿಯಾಗೇ ಬುದ್ಧಿ ಹೇಳಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಮಂತ್ರಿ ಪದವಿಯಿಂದ ಕೆಳಗಿಳಿಸುವುದರ ಜೊತೆಗೆ ಮುಖ್ಯಮಂತ್ರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣೆಯ ಸಮಯದಲ್ಲಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡಿರುವ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೂ ಒತ್ತಡ ತರಲಾಗುವುದು ಎಂದು ಜಾತ್ಯತೀತ ಜನತಾ ದಳದ ಅಧ್ಯಕ್ಷ ಸಿದ್ಧರಾಮಯ್ಯ ಸೇರಿದಂತೆ ದಳ ಮುಖಂಡರು ಹೇಳಿದ್ದಾರೆ.

ದಳಗಳ ವಿಲಿ

ಉಭಯ ದಳಗಳ ವಿಲೀನ ಕಾಲ ಸನ್ನಿಹಿತ : ದೇವೇಗೌಡರ ಗೆಲುವಿನಿಂದ ಜಾತ್ಯತೀಯ ಹಾಗೂ ಸಂಯುಕ್ತ ಜನತಾ ದಳಗಳು ಒಂದಾಗುವ ಕಾಲ ಸನ್ನಿಹಿತವಾಗಿದೆ. ದೇವೇಗೌಡರು ಹಾಗೂ ರಾಮಕೃಷ್ಣ ಹೆಗಡೆ ಚರ್ಚಿಸಿದ ನಂತರ ಉಭಯ ದಳಗಳ ವಿಲೀನ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಸಂಯುಕ್ತ ಜನತಾ ದಳದ ಎಂ.ಪಿ.ಪ್ರಕಾಶ್‌ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+