ವೈರಾಗ್ಯಮೂರ್ತಿಗೆ ಸೋಮವಾರ ಸಂಜೆಯಿಂದ 1008 ಕಳಶಗಳ ಮಹಾಮಜ್ಜನ

ಕಾರ್ಕಳ : ಕಾರ್ಕಳದ ಶ್ರೀ ಭಗವಾನ್‌ ಬಾಹುಬಲಿಗೆ ಫೆ.25ರ ಸೋಮವಾರ ಸಂಜೆಯಿಂದ 1008 ಕಳಶಗಳ ಪವಿತ್ರ ಮಹಾಮಜ್ಜನ ನಡೆಯಲಿದೆ. ಈ ಮಸ್ತಕಾಭಿಷೇಕಕ್ಕೆ ಜೈನ ಸಮಾಜ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಮಹಾಮಸ್ತಕಾಭಿಷೇಕದ ಧಾರ್ಮಿಕ ವಿಧಿಗಳ ಕೊನೆಯ ದಿನವಾಗಿರುವ ಸೋಮವಾರ ಸಂಜೆ 4 ಗಂಟೆಯಿಂದ ಅಗ್ರೋದಕ, ನಿತ್ಯವಿಧಿ ಸಹಿತ ವೈರಾಗ್ಯಮೂರ್ತಿಗೆ 1008 ಪವಿತ್ರ ಕಳಶಗಳ ಮಹಾ ಮಜ್ಜನ, ಮಹಾ ಪೂಜೆ, ಪಾದಪೂಜೆ ಮತ್ತು ಸಂಘ ಪೂಜೆ ನಡೆಯಲಿದೆ.

ಸಂಜೆ ನಾಲ್ಕು ಗಂಟೆಗೆ ಆರಂಭವಾಗಲಿರುವ ಈ ವಿಧಿಗಳು ಮಧ್ಯರಾತ್ರಿ 3 ಗಂಟೆಯ ತನಕ ನಡೆಯಲಿದೆ ಎಂದು ಮಹಾಮಜ್ಜನ ಸಮಿತಿ ತಿಳಿಸಿದೆ. ಸೋಮವಾರ ಬೆಳಗ್ಗೆಯಿಂದಲೇ ಸಿದ್ಧಚಕ್ರ ಯಂತ್ರಾರಾಧನೆ, ಅಗ್ನಿತ್ರಯಾರ್ಚನಾಪೂರ್ವಕ ನಿರ್ವಾಣ ಕಲ್ಯಾಣ ಮಹೋತ್ಸವಗಳು ನಡೆಯುತ್ತಿವೆ.

ರಾಜ್ಯಪಾಲರ ಭೇಟಿ : ಭಾನುವಾರ ಮಹಾಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು, ಬಾಹುಬಲಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.

(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+