ಭಾರತಕ್ಕೆ ಇನಿಂಗ್ಸ್‌ ಹಾಗೂ 101 ರನ್‌ ಜಯ, ಕುಂಬ್ಳೆ ಪಂದ್ಯಶ್ರೇಷ್ಠ

ನಾಗಪುರ : ಸೋಮವಾರದ ಮೊದಲ ಪಾಳಿಯಲ್ಲೇ ಕೊನೆಗೊಂಡ ಆಟದಲ್ಲಿ , ಜಿಂಬಾಬ್ವೆ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್‌ ಹಾಗೂ 101 ರನ್‌ಗಳ ಜಯ ಗಳಿಸಿದೆ. ಇದರೊಂದಿಗೆ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-0 ಯ ಮುನ್ನಡೆ ಸಾಧಿಸಿತು.

ಅನಿಲ್‌ಕುಂಬ್ಳೆ ಹಾಗೂ ಹರ್ಭಜನ್‌ರ ಮಾರಕ ಸ್ಪಿನ್‌ ಸುಳಿಗೆ ಸಿಲುಕಿದ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳು ಸೋಮವಾರದ ಆಟದಲ್ಲಿ ಯಾವುದೇ ಪ್ರತಿರೋಧ ತೋರದೆ ಶರಣಾದರು. ಭಾನುವಾರ ಆಟದ ಕೊನೆಗೆ 4 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿದ್ದ ಜಿಂಬಾಬ್ವೆ, ಸೋಮವಾರದ ಆಟದಲ್ಲಿ 182 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೋಮವಾರದ ಆಟದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಹರ್ಭಜನ್‌ ನಾಲ್ಕು ವಿಕೆಟ್‌ ಪಡೆದರೆ, ಉಳಿದೆರಡು ವಿಕೆಟ್‌ಗಳನ್ನು ಕುಂಬ್ಳೆ ಪಡೆದರು. ಮೊದಲ ಇನಿಂಗ್ಸ್‌ನ 4, ಎರಡನೇ ಇನಿಂಗ್ಸ್‌ನ 5 ವಿಕೆಟ್‌ ಸೇರಿದಂತೆ ಒಟ್ಟು 9 ವಿಕೆಟ್‌ ಪಡೆದ ಕುಂಬ್ಳೆ ಪಂದ್ಯ ಪುರೋಷತ್ತಮ ಗೌರವಕ್ಕೆ ಪಾತ್ರರಾದರು. ಫೆ.28 ರಿಂದ ಎರಡನೇ ಟೆಸ್ಟ್‌ ದೆಹಲಿಯಲ್ಲಿ ಪ್ರಾರಂಭವಾಗಲಿದೆ.

ಸ್ಕೋರ್‌ ವಿವರ :
ಜಿಂಬಾಬ್ವೆ : ಮೊದಲ ಇನಿಂಗ್ಸ್‌ - 287, ಎರಡನೇ ಇನಿಂಗ್ಸ್‌ - 182.
ಭಾರತ : ಮೊದಲ ಇನಿಂಗ್ಸ್‌ - 570 ಕ್ಕೆ 7 ಡಿಕ್ಲೇರ್‌ ( ತೆಂಡೂಲ್ಕರ್‌- 176, ಎಸ್‌.ಎಸ್‌.ದಾಸ್‌-105, ಎಸ್‌.ಬಂಗಾರಾ- ಅಜೇಯ 100).

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+