ತಿಪಟೂರು : ಸಂಕ್ರಾಂತಿ ರಾತ್ರಿ ದರೋಡೆ, ಮನೆ ಮಂದಿ ಮೇಲೆ ಹಲ್ಲೆ

ಬೆಂಗಳೂರು: ತುಮಕೂರು ಜಿಲ್ಲೆ ಯ ತಿಪಟೂರಿಗೆ ಸಮೀಪದ ಮನೆಯಾಂದಕ್ಕೆ ಸಂಕ್ರಾಂತಿ ಹಬ್ಬದ ರಾತ್ರಿ (ಸೋಮವಾರ, ಜ.14) ನುಗ್ಗಿರುವ ಡಕಾಯಿತರ ತಂಡ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ನಗ ನಗದು ದೋಚಿದ್ದಾರೆ.

1 ಲಕ್ಷ ರುಪಾಯಿ ನಗದು ಹಾಗೂ ಸುಮಾರು 50 ಸಾವಿರ ರುಪಾಯಿ ಮೌಲ್ಯದ ಅಭರಣಗಳನ್ನು ದೋಚಿರುವ ದರೋಡೆಕೋರರು, ಪ್ರತಿಭಟನೆ ವ್ಯಕ್ತಪಡಿಸಿದ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಗಾರರಿಗೆ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಡಕಾಯಿತರ ಹಲ್ಲೆಯಲ್ಲಿ ಒಬ್ಬನಿಗೆ ಹೆಚ್ಚಿನ ಗಾಯಗಳಾಗಿದ್ದು , ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ಪ್ರಕರಣದ ಬಗೆಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+