ಭಾಲ್ಕಿಯ ಪ್ರಕಾಶ್ ಖಂಡ್ರೆ ಶಾಸಕತ್ವ ರದ್ದುಗೊಳಿಸಿದ ಹೈ ಕೋರ್ಟ್
ಬೆಂಗಳೂರು : ಜನ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿರುವ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರ ಶಾಸಕತ್ವವನ್ನು ರದ್ದುಗೊಳಿಸಿ ರಾಜ್ಯ ಹೈ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರವನ್ನು ಪ್ರಕಾಶ್ ಖಂಡ್ರೆ ಈವರೆಗೂ ಪ್ರತಿನಿಧಿಸುತ್ತಿದ್ದರು.
ಚುನಾವಣಾ ಸಂದರ್ಭದಲ್ಲಿ ಪ್ರಕಾಶ್ ಖಂಡ್ರೆ ಅವರು ಸರ್ಕಾರಿ ಗುತ್ತಿಗೆ ಪಡೆದ ಕಾರಣ 1951 ರ ಜನ ಪ್ರತಿನಿಧಿ ಕಾಯ್ದೆಯ 9-ಎ ಕಲಂ ಉಲ್ಲಂಘನೆಯಾಗಿದೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ್ ಖಂಡ್ರೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎ.ವಿ. ಶ್ರೀನಿವಾಸ ರೆಡ್ಡಿ ಈ ಮಹತ್ವದ ತೀರ್ಪು ನೀಡಿದ್ದಾರೆ.
ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ವಿಜಯಕುಮಾರ್ ಖಂಡ್ರೆ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ನ್ಯಾಯಾಲಯ ಕೇಂದ್ರ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications