ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ

ಧರ್ಮಸ್ಥಳ : ಡಿಸೆಂಬರ್‌ 14ರ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ. ಇದಕ್ಕಾಗಿ ಧರ್ಮಸ್ಥಳ ಸಜ್ಜುಗೊಂಡಿದೆ. ರಾಜ್ಯಮಟ್ಟದ ವಸ್ತು ಪ್ರದರ್ಶನದ ಉದ್ಘಾಟನೆಯಾಂದಿಗೆ ಲಕ್ಷದೀಪೋತ್ಸವ ಕಾರ್ಯಕ್ರಮಗಳಿಗೆ ಚಾಲನೆಯೂ ದೊರೆತಿದೆ.

ಕಾರ್ಯಕ್ರಮದ ಅಂಗವಾಗಿ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸರ್ವಧರ್ಮ - ಸಾಹಿತ್ಯ ಸಮ್ಮೇಳನವನ್ನೂ ಏರ್ಪಡಿಸಲಾಗಿದೆ. ವಸ್ತುಪ್ರದರ್ಶನದಲ್ಲಿ ಧಾರ್ಮಿಕ, ಕಲೆ, ಸಾಹಿತ್ಯ, ವಾಣಿಜ್ಯ, ಶೈಕ್ಷಣಿಕ, ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡುವ 138 ಮಳಿಗೆಗಳಿವೆ.

ಮಂಗಳವಾರ ಈ ವಸ್ತುಪ್ರದರ್ಶನವನ್ನು ಪಶ್ಚಿಮ ವಲಯದ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮಪಾಲ ನೇಗಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತ-ಧರ್ಮಗಳ ಹೆಸರಲ್ಲಿ ಕೊಲೆ, ಗಲಭೆ ನಡೆಯುತ್ತಿರುವ ಈ ಹೊತ್ತಿನಲ್ಲಿ ವೀರೇಂದ್ರ ಹೆಗಡೆಯವರು ಸರ್ವಧರ್ಮ ಸಮಭಾವದ ಮಹತ್ವವನ್ನು ಜಗತ್ತಿಗೇ ಸಾರುವ ಮೂಲಕ ಕೋಮು ಸೌಹಾರ್ದದ ಹರಿಕಾರರಾಗಿದ್ದಾರೆ ಎಂದು ಪ್ರಶಂಸಿಸಿದರು.

ಕೋಮು ಸೌಹಾರ್ದ, ಗ್ರಾಮೀಣ ಪ್ರಗತಿ, ಸರ್ವರಿಗೂ ಶಿಕ್ಷಣ ಮೊದಲಾದ ಕನಸುಗಳನ್ನು ಮಹಾತ್ಮಾಗಾಂಧೀ ಕಂಡಿದ್ದರು. ಇಂದು ವೀರೇಂದ್ರ ಹೆಗಡೆಯವರು ಗಾಂಧಿಜಿಯವರ ಈ ಎಲ್ಲ ಕನಸುಗಳನ್ನೂ ಸಾಕಾರಗೊಳಿಸಿದ್ದಾರೆ ಎಂದರು.

ಜನಮರುಳೋ...: ಇಂತಹ ಕಾರ್ಯಕ್ರಮಗಳು ಜನಮರುಳೋ ಜಾತ್ರೆ ಮರುಳೋ ಎನ್ನುವ ಗಾದೆಯಂತಾಗದೆ, ಜನರಿಗೆ ದಾರಿದೀಪವಾಗಬೇಕು. ಆ ಕಾರ್ಯವನ್ನು ಕಳೆದ 23 ವರ್ಷಗಳಿಂದ ನಡೆಸಲಾಗುತ್ತಿರುವ ವಸ್ತುಪ್ರದರ್ಶನ ಮಾಡುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಅಪೂರ್ವಾ ಕೆ. ಕೇಶವ್‌ ಅವರ ಭರತನಾಟ್ಯ ಏರ್ಪಡಿಸಲಾಗಿತ್ತು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+