ಡಿ.29ರಿಂದ ಬೆಂಗಳೂರಿನವರೆಗೂ ಬರಲಿದೆ ಸಂಘಮಿತ್ರ ಎಕ್ಸ್‌ಪ್ರೆಸ್
ಪಟನಾ : ಬಿಹಾರದ ರಾಜಧಾನಿ ಪಟನಾ ಮತ್ತು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಗಳ ನಡುವೆ ವಾರದಲ್ಲಿ ಎರಡು ದಿನ ಸಂಚರಿಸುವ ಸಂಘಮಿತ್ರ ಎಕ್ಸ್‌ಪ್ರೆಸ್ ಡಿ.29ರಿಂದ ಬೆಂಗಳೂರಿನ ವರೆಗೂ ಬರಲಿದೆ. ಈ ರೈಲಿನ ಓಡಾಟವನ್ನು ಬೆಂಗಳೂರಿನ ಯಶವಂತಪುರದವರಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
2002ರ ಜನವರಿ 10ರಿಂದ ಈ ರೈಲು (6596 ಯುಪಿ/6595 ಡಿಎನ್) ಪಟನಾ-ಚೆನ್ನೈ- ಯಶವಂತಪುರ ನಡುವೆ ಸಂಚರಿಸಲಿದೆ. ಬೆಳಗ್ಗೆ 5ಗಂಟೆ 5 ನಿಮಿಷಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರುವ ಈ ರೈಲು, 10.30ಕ್ಕೆ ಅಲ್ಲಿಂದ ಹೊರಟು ಸಂಜೆ 5-45ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ.
ಮಾರನೇ ದಿನ ಬೆಳಗ್ಗೆ 5-45ಕ್ಕೆ ಯಶವಂತಪುರ ರೈಲು ನಿಲ್ದಾಣವನ್ನು ಬಿಡುವ ಈ ರೈಲು ಮಧ್ಯಾಹ್ನ ಚೆನ್ನೈ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 1.05ಕ್ಕೆ ಬಿಡುವ ರೈಲು ಮರುದಿನ ಮಧ್ಯಾಹ್ನ 1.35ಕ್ಕೆ ಪಟನಾ ರೈಲು ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications