ಪ್ರಶಸ್ತಿಗಳ ವಿಲೇವಾರಿ ಮಾಡುವ ರಾಣಿ ಸತೀಶ್ಗೆ ಪ್ರಶಸ್ತಿ ಇಲ್ವಾ ?
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಪ್ರಶಸ್ತಿಗಳ ಬೇಡಿಕೆ ಅರ್ಜಿಗಳನ್ನು ನಿಭಾಯಿಸಿ ಸುಸ್ತಾಗಿ ಬಿಟ್ಟಿದ್ದಾರಂತೆ.
ಹಲವು ಸಮಾರಂಭಗಳಲ್ಲಿ ಪ್ರಶಸ್ತಿಗೆ ಎಷ್ಟು ಸಾವಿರ ಅರ್ಜಿ ಬಂದಿದೆ ಎಂಬ ಬಗ್ಗೆ ಹೇಳಿಕೊಂಡು ಆಯ್ಕೆಯ ಕಷ್ಟವನ್ನು ವಿವರಿಸುತ್ತಿದ್ದ ಸಚಿವೆ ಈ ಅರ್ಜಿಗಳನ್ನು ಸ್ವೀಕರಿಸಿ ತಾವು ಸುಸ್ತಾಗಿರುವುದಾಗಿ ಹೇಳಿದ್ದಾರೆ. ಅವರು ಗುರುವಾರ ಇಲ್ಲಿನ ವನಿತಾ ಸಾಹಿತ್ಯ ವೇದಿಕೆಯಲ್ಲಿ ವನಿತಾಶ್ರೀ ಪ್ರಶಸ್ತಿ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಪ್ರಶಸ್ತಿ ಪಡೆಯುವ ಆಸೆಯಿಂದ ಯಾಪಾಟಿ ಅರ್ಜಿಗಳು ಬರುತ್ತಿವೆ ಎಂದರೆ ಅವುಗಳನ್ನು ಪರಿಶೀಲಿಸಿ ನನಗೆ ಸಾಕೋ ಸಾಕಾಯ್ತು. ಈ ಪ್ರಶಸ್ತಿಯ ಬೇಡಿಕೆ, ಒತ್ತಡಗಳನ್ನು ತಡೆದುಕೊಂಡಿರುವುದಕ್ಕೆ ನನಗೇ ಒಂದು ಪ್ರಶಸ್ತಿ ನೀಡಬೇಕು ಎಂದು ಸಚಿವೆ ತಮ್ಮ ಕಷ್ಟ ತೋಡಿಕೊಂಡರು.
ಪ್ರಶಸ್ತಿ ಬಂದರೆ ಸಂತೋಷವಾಗುತ್ತದೆ ಹೌದು. ಆದರೆ ಈ ಪ್ರಶಸ್ತಿಗಾಗಿ ಏನೆಲ್ಲಾ ಮಾರ್ಗ ಬಳಸುವ, ಶತಾಯ ಗತಾಯ ಪ್ರಯತ್ನಿಸುವ ಪ್ರವೃತ್ತಿಯ ಬಗ್ಗೆ ರಾಣಿ ಸತೀಶ್ ಬೇಜಾರು ಮಾಡಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications