Get Updates
Get notified of breaking news, exclusive insights, and must-see stories!

ಕಂಪ್ಯೂಟರ್‌ ಕೊಳ್ಳಿರೋ..

Computerಬೆಂಗಳೂರು : ಜನತಾ ಊಟದ ಮಾದರಿಯಲ್ಲಿ ಜನ ಸಾಮಾನ್ಯರಿಗೂ ಕಂಪ್ಯೂಟರ್‌ ಸೌಲಭ್ಯ ಒದಗಿಸುವ ಜನತಾ ಕಂಪ್ಯೂಟರ್‌ ಯೋಜನೆ ಸಿದ್ಧವಾಗಿದೆ. ಜನ ಸಾಮಾನ್ಯರತ್ತ ಕಂಪ್ಯೂಟರ್‌ ಒಯ್ಯುವ ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ಬರುವ ನಿರೀಕ್ಷೆಯಿದೆ.

ಮ್ಯಾನುಫ್ಯಾಕ್ಚರ್‌ ಅಸೋಸಿಯೇಷನ್‌ ಆಫ್‌ ಇನ್‌ಫರ್ಮೇಷನ್‌ ಟೆಕ್ನಾಲಜಿ(ಎಂಎಐಟಿ), ವಿಪ್ರೋ ಇನ್ಫೋಟೆಕ್‌ ಎನ್‌ಕೋರ್‌ ಸಾಫ್ಟ್‌ವೇರ್‌, ಎಚ್‌ಸಿಎಲ್‌ ಇನ್ಫೋ ಸಿಸ್ಟಮ್ಸ್‌ ಮತ್ತು ವಿಂಟ್ರೋನ್‌ ಸಂಸ್ಥೆಗಳ ಸಹಯೋಗದಲ್ಲಿ ಜನತಾ ಪಿಸಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ಪ್ರಾದೇಶಿಕ ಭಾಷೆಯನ್ನು ಅಳವಡಿಸಬಹುದಾದ ಕಡಿಮೆ ಬೆಲೆಯ ಕಂಪ್ಯೂಟರ್‌ ತಯಾರಿಕೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಈ ಕಂಪ್ಯೂಟರ್‌ಗಳನ್ನು ಬೃಹತ್‌ ಸಂಖ್ಯೆಯಲ್ಲಿ ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶ ಎಂದು ಎಂಎಐಟಿಯ ನಿರ್ದೇಶಕ ವಿನ್ನೀ ಮೆಹ್ತಾ ತಿಳಿಸಿದ್ದಾರೆ.

ಮಧ್ಯಮ ವರ್ಗದವರಿಗೂ ಕಂಪ್ಯೂಟರ್‌ ಸೌಲಭ್ಯ

ಜನತಾ ಕಂಪ್ಯೂಟರ್‌ನ ಪ್ರೊಸೆಸರ್‌, ಇಂಟೆಲ್‌ 486 ನ ನಿರ್ವಹಣೆಗೆ ಸಮನಾಗಿರುತ್ತದೆ. ಈ ಕಂಪ್ಯೂಟರ್‌ಗಳನ್ನು ಪ್ರಾದೇಶಿಕ ಕಂಪ್ಯೂಟರ್‌ ಉತ್ಪಾದಕರೂ ಉತ್ಪಾದಿಸಲು ಅನುಕೂಲವಾಗುವಂತೆ ತಯಾರಿಸಲಾಗುವುದು. ಸುಮಾರು ಒಂದೂವರೆ ಅಥವಾ 2 ಕೋಟಿ ರೂಪಾಯಿ ವೆಚ್ಚದಲ್ಲಿ 2.5 ಲಕ್ಷ ಯೂನಿಟ್‌ಗಳನ್ನು ತಯಾರಿಸುವ ಯೋಜನೆಯಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಈ ಯೋಜನೆಗೆ ನೆರವು ಸಿಗುವ ಭರವಸೆ ಸಿಕ್ಕಿದೆ. ಆದರೆ ಈ ಬಗೆಗಿನ ಮಾದರಿ ಕಂಪ್ಯೂಟರ್‌ಗಳನ್ನು ಇನ್ನು ತಯಾರಿಸಬೇಕಾಗಿದೆಯಷ್ಟೇ.

ದೇಶದಲ್ಲಿ ಕಂಪ್ಯೂಟರ್‌ ಮಾರಾಟ ದರದಲ್ಲಿಯೂ ಈ ವರ್ಷ ಅಂತಹ ಪ್ರಗತಿಯೇನೂ ಕಂಡು ಬಂದಿಲ್ಲ. ಭಾರತದಲ್ಲಿ ಕಂಪ್ಯೂಟರ್‌ ಕೊಳ್ಳುವವರು ಮೇಲ್ಮಧ್ಯಮ ವರ್ಗದವರು ಅಥವಾ ಶ್ರೀಮಂತರು. ಮಧ್ಯಮವರ್ಗದವರು ಕಂಪ್ಯೂಟರ್‌ ಕೊಳ್ಳುವಂತಾಗಬೇಕಾದರೆ ಕಂಪ್ಯೂಟರ್‌ ದರ ಮತ್ತು ಪ್ರಾದೇಶಿಕ ಭಾಷೆಯ ಅಳವಡಿಕೆಯ ಅಗತ್ಯವಿದೆ ಎಂದು ಮೆಹ್ತಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಯೋಜನೆಗೆ ಪೂರಕವಾಗಿ ಎಂಎಐಟಿಯು, ಬಜೆಟ್‌ ಸಲಹಾ ಪಟ್ಟಿಯಾಂದನ್ನು ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಿದೆ. ಈ ಸಲಹೆಗಳ ಪ್ರಕಾರ-

  • ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಜೆಟ್‌ನ ಶೇ 3ರಷ್ಟು ಹಣವನ್ನು ಐಟಿಯಲ್ಲಿ ತೊಡಗಿಸುವ ಬಗ್ಗೆ ಖಾತರಿ ನೀಡುವುದು
  • ಪಿಸಿ ಕೊಳ್ಳಲು ಭವಿಷ್ಯ ನಿಧಿಯ ಹಣ ಉಪಯೋಗಿಸಿಕೊಳ್ಳಲು ಅವಕಾಶ
  • ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡುವ ಐಟಿ ಉಪಕರಣಗಳಿಗೆ ಪ್ರಾದೇಶಿಕ ತೆರಿಗೆ ವಿನಾಯಿತಿ
  • ಐಟಿ ಉತ್ಪನ್ನಗಳ ಆಮದು ಮತ್ತು ರಫ್ತಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ನೀಡಲು ರಾಷ್ಟ್ರೀಯ ದ್ವಿಪಕ್ಷೀಯ ಒಪ್ಪಂದಗಳಿಗೆ ತಿದ್ದುಪಡಿ ತರುವುದು
  • ಐಟಿ ಕ್ಷೇತ್ರದಲ್ಲಿ ಸಾಕಷ್ಟು ಅರ್‌ ಆ್ಯಂಡ್‌ ಡಿಗೆ ಅವಕಾಶ ನೀಡುವುದು.
ಜನತಾ ಊಟ ಮತ್ತು ಜನತಾ ಕಂಪ್ಯೂಟರ್‌

ಜನತಾ ಕಂಪ್ಯೂಟರ್‌ ಯೋಜನೆ- ದೇವರಾಜ ಅರಸು ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಎಚ್‌.ಜಿ.ರಾಮುಲು ಅವರು ಜಾರಿಗೆ ತಂದಿದ್ದ ಜನತಾ ಊಟದ ಯೋಜನೆಯನ್ನು ನೆನಪಿಗೆ ತರುತ್ತದೆ. ಹೊಟೇಲ್‌ಗಳಲ್ಲಿ ಊಟ ದುಬಾರಿ. ಜನ ಸಾಮಾನ್ಯರಿಗೆ ಹೊಟೇಲ್‌ ಊಟ ಕೈಗೆಟುಕುವುದಿಲ್ಲ ಎನ್ನುವ ಕಾಳಜಿಯಿಂದ ರಾಮುಲು ಅವರು ಜನತಾ ಊಟ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯ ಪ್ರಕಾರ ಎಲ್ಲ ಹೊಟೇಲ್‌ಗಳಲ್ಲೂ ಊಟದ ದರ ಏಕರೂಪಯಾಗಿರಬೇಕು.

ಹೊಟೇಲ್‌ಗಳೇನೊ ಜನತಾ ಊಟ ಯೋಜನೆ ಜಾರಿಗೆ ತಂದವು. ಆದರೆ, ಗುಣಮಟ್ಟ ಪಾತಾಳಕ್ಕಿಳಿಯಿತು. ಕಾಸಿಗೆ ತಕ್ಕ ಕಜ್ಜಾಯ ಅನ್ನುವಂತೆ ಅನ್ನ , ಸಾಂಬಾರ್‌, ಮಜ್ಜಿಗೆ.. ಜನರಿಗೆ ಬೇಜಾರು. ಪರಿಣಾಮ, ಬಹುತೇಕ ಸರ್ಕಾರಿ ಯೋಜನೆಗಳಂತೆ ಜನತಾ ಊಟ ಯೋಜನೆ ಇತಿಹಾಸದ ಕಸದಬುಟ್ಟಿಗೆ. ಇವತ್ತು ಜನತಾ ಕಂಪ್ಯುೂಟರ್‌ ಯೋಜನೆ ಎಂದಾಗ ಜನತಾ ಊಟ ಯೋಜನೆ ತಟ್ಟನೆ ನೆನಪಿಗೆ ಬರುತ್ತದೆ. ಊಟದ ಪಾಡು ಕಂಪ್ಯೂಟರ್‌ಗೆ ಬರದಿರಲಿ ಎಂದು ಆಶಿಸೋಣ!

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+