Get Updates
Get notified of breaking news, exclusive insights, and must-see stories!

ಇನ್ನೊಬ್ಬ ಗೋಪಾಲಪ್ಪ ? 1 ಕೋಟಿ ರು.ಬ್ಯಾಂಕ್‌ಹಣ ಗುಳುಂ

ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಐಸಿಐಸಿಐ ಬ್ಯಾಂಕಿನ ಹಣ 1 ಕೋಟಿ 3 ಲಕ್ಷ 29 ಸಾವಿರದ 617 ರುಪಾಯಿಯನ್ನು ಗುಳುಂ ಮಾಡಿದ್ದಾನೆ ಎಂಬ ಆರೋಪದ ಮೇಲೆ ವಿ.ಎಸ್‌.ವಿವೇಕಾನಂದ ಎಂಬಾತನನ್ನು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಈತ ಬ್ಯಾಂಕಿನ ಕಂಟೋನ್ಮೆಂಟ್‌ ಶಾಖೆಯ ಸಹಾಯಕ ಮೇನೇಜರ್‌. ಬ್ಯಾಂಕ್‌ ಆಫ್‌ ಮಧುರಾದಲ್ಲಿ ಕೆಲಸ ಮಾಡಿದ ಅನುಭವವಿದೆ. ಡಿ.ರವಿಕುಮಾರ್‌, ನಾಗೇಶ್‌ ಹಾಗೂ ಎಂ.ರವಿ ಎನ್ನುವವರ ಖಾತೆಗಳಿಂದ ಹಣವನ್ನು ಬೇಕಾದಾಗ ತೆಗೆದು, ಬ್ಯಾಂಕ್‌ನ ಕ್ಲಿಯರಿಂಗ್‌ ಅಕೌಂಟಿನಿಂದ ತೆಗೆದ ಹಣವನ್ನು ಭರ್ತಿ ಮಾಡುತ್ತಾ ಬಂದಿದ್ದಾನೆ. ಈ ಮೂವರ ಖಾತೆಗಳಿಂದ ಚೆಕ್‌ ಮೂಲಕ ತನಗೆ ಬೇಕಾದಾಗಲೆಲ್ಲಾ ಹಣವನ್ನು ತೆಗೆದಿದ್ದಾನೆ. ಕಂಪ್ಯೂಟರಲ್ಲಿ ತಪ್ಪು ಮಾಹಿತಿ ದಾಖಲಿಸಿ, ಯಾರ್ಯಾರದೋ ಚೆಕ್ಕುಗಳ ಉಪಯೋಗಿಸಿ ಅವ್ಯವಹಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಐಸಿಐಸಿಐ ಬ್ಯಾಂಕ್‌ ಜತೆ ಬ್ಯಾಂಕ್‌ ಆಫ್‌ ಮಧುರಾ ವಿಲೀನವಾಯಿತು. ಆ ಸಮಯದಲ್ಲಿ ಎಲ್ಲಾ ಖಾತೆಗಳ ಲೆಕ್ಕವನ್ನು ಪುನರ್‌ ಪರಿಶೀಲಿಸಿದಾಗ ಬ್ಯಾಂಕ್‌ನ ಕ್ಲಿಯರಿಂಗ್‌ ಖಾತೆಯಲ್ಲಿ ಹಣ ಖೋತಾ ಆಗಿರುವುದು ಗೊತ್ತಾಗಿದೆ. ಬ್ಯಾಂಕ್‌ ಮೇನೇಜರ್‌ ಸೈಯದ್‌ ಅನೀಸ್‌ ಅಹಮದ್‌ ನ.23ರಂದು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು.

ಕೊಸರು : 1997ರಿಂದ ಬ್ಯಾಂಕ್‌ ಮೇನೇಜರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿರುವ ಈತನಿಗೆ ಹರ್ಷದ್‌ ಮೆಹ್ತಾ ಮಾದರಿಯೋ ಅಥವಾ ದುಪ್ಪಟ್ಟು ಬಡ್ಡಿಯ ಸ್ಕೀಮಿನ ನೆಪವೊಡ್ಡಿ ದಶಕಗಳ ಹಿಂದೆ ಭಾರೀ ಹಣ ದೋಚಿದ್ದ ಗೋಪಾಲಪ್ಪನ ಮಾದರಿಯೋ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+