ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ - ಮಾರಾಟ

By Staff
|
Google Oneindia Kannada News

ಬೆಂಗಳೂರು : ಮಹಿಳಾ ಸಬಲೀಕರಣ ವರ್ಷದ ಅಂಗವಾಗಿ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಆಶ್ರಯದಲ್ಲಿ ಮಹಿಳೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಿದೆ. ‘ಈವ್ಸ್‌ ಎನ್‌ಕ್ಲೇವ್‌’ ಎಂಬ ಹೆಸರಿನ ಈ ಪ್ರದರ್ಶನವನ್ನು ಗುರುವಾರ ಬೆಳಗ್ಗೆ ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ನಿರ್ಮಿಸಲಾಗಿರುವ 40ಕ್ಕೂ ಹೆಚ್ಚು ಮಳಿಗೆಗಳಿಗೆ ಭೇಟಿ ನೀಡಿ, ಮಹಿಳೆಯರೇ ತಯಾರಿಸಿರುವ ಗೃಹೋಪಯೋಗಿ ವಸ್ತುಗಳು, ಸಿದ್ಧ ಉಡುಪುಗಳು ಹಾಗೂ ಸೀರೆಗಳನ್ನು ಅವರು ವೀಕ್ಷಿಸಿದರು. ಮಹಿಳೆಯರು ಸ್ವಉದ್ಯೋಗಿಗಳಾಗಿ, ತಾವು ಅಬಲೆಯರಲ್ಲ ಸಬಲೆಯರು ಎಂಬುದನ್ನು ನಿರೂಪಿಸಬೇಕು ಎಂದು ಸಚಿವೆ ತಿಳಿಸಿದರು.

ಮಹಿಳಾ ಸಬಲೀಕರಣ ವರ್ಷದ ಅಂಗವಾಗಿ ಮಹಿಳಾ ಅಧ್ಯಯನ ವಿಭಾಗ ಹಾಗೂ ಮುಂಬೈನ ಭಾರತೀಯ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜಯನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನ ಆವರಣದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ.

ಪ್ರದರ್ಶನದ ಅಂಗವಾಗಿ ಶುಕ್ರವಾರ ದಕ್ಷಿಣ ಪ್ರಾದೇಶಿಕ ಸಮ್ಮೇಳನ ಸಹ ನಡೆಯಲಿದ್ದು, ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಡಿ.ಬಿ. ಇನಾಂದಾರ್‌ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಮಾಜ ಅವರಿಗೆ ಹೇಗೆ ನೆರವಾಗುತ್ತಿದೆ ಎಂಬ ಬಗ್ಗೆ ಗೋಷ್ಠಿಗಳೂ ನಡೆಯಲಿವೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X