Get Updates
Get notified of breaking news, exclusive insights, and must-see stories!

ವಿಸಿಟಿಂಗ್‌ ಕಾರ್ಡ್‌ ತೋರಿಸಿ, ಅಪ್ನಾಲೋನ್‌.ಕಾಂ ಸಾಲ ಪಡೆಯಿರಿ

ನವದೆಹಲಿ : ಅಪ್ನಾಲೋನ್‌.ಕಾಮ್‌ ಗ್ರಾಹಕರಿಗೆ ಅನುಕೂಲವಾಗುವಂತೆ ವಿಸಿಟಿಂಗ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಆಧಾರದ ಮೇಲೆ ಸಾಲ ನೀಡಲು ಮುಂದೆ ಬಂದಿದೆ.

ಗ್ರಾಹಕರು ತಮ್ಮ ವೈಯಕ್ತಿಕವಾದ ಯಾವುದೇ ಕಾರಣವೊಡ್ಡಿ ಎರಡೂವರೆ ಲಕ್ಷ ರುಪಾಯಿವರೆಗೆ ಸಾಲ ಪಡೆಯಬಹುದು. ಅಪ್ನಾಲೋನ್‌.ಕಾಮ್‌, ಸ್ಟಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ನ ಸಹಯೋಗದೊಂದಿಗೆ ಈ ಯೋಜನೆಯನ್ನು ಹಮ್ಮಿಕೊಂಡಿದೆ. ಕಡಿಮೆ ಬಡ್ಡಿ ದರದಲ್ಲಿ ಸಿಗುವ ಲೋನ್‌ ಪಡೆಯಲು ಗ್ರಾಹಕರು ಯಾವುದೇ ದಾಖಲೆ ಪತ್ರಗಳನ್ನು ಒದಗಿಸಬೇಕಾಗಿಲ್ಲ. ಸೀದಾ ಬ್ಯಾಂಕ್‌ಗೆ ಹೋಗಿ ವಿಸಿಟಿಂಗ್‌ ಕಾರ್ಡ್‌ ತೋರಿಸಿ ಲೋನ್‌ ತೆಗೆದುಕೊಂಡು ಬರಬಹುದು.

ಸಾಲ ಪಡೆಯಲು ದಾಖಲೆ ಪತ್ರಗಳಿಗಾಗಿ ಕಚೇರಿಯಿಂದ ಕಚೇರಿಗೆ ಓಡಾಡುವ ಉಸಾಬರಿ ಇರುವುದಿಲ್ಲ. ಗ್ರಾಹಕರು ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಯಾವ ಹುದ್ದೆಯಲ್ಲಿದ್ದಾರೆ ಎಂಬುದನ್ನು ವಿಸಿಟಿಂಗ್‌ ಕಾರ್ಡ್‌ ಮುಖಾಂತರ ಖಾತರಿಪಡಿಸಿಕೊಂಡು ಬ್ಯಾಂಕ್‌ ಲೋನ್‌ ನೀಡುತ್ತದೆ ಎಂದು ಸಂಸ್ಥೆಯ ಸಿಇಓ ಹರ್ಷವರ್ಧನ್‌ ರೂಂಗ್ಟಾ ಅವರ ಪ್ರಕಟಣೆ ತಿಳಿಸಿದೆ.

ದಾಖಲೆ ಪತ್ರಗಳನ್ನು ಒದಗಿಸುವಂತೆ ಗ್ರಾಹಕರಿಗೆ ದುಂಬಾಲು ಬೀಳಬೇಕಾಗಿಲ್ಲವಾದ್ದರಿಂದ ಈ ಸಾಲ ಯೋಜನೆ ಅತ್ಯಂತ ವೇಗವಾಗಿ ನಿರ್ವಹಿಸುವುದು ಸಾಧ್ಯ ಎಂಬುದು ಹರ್ಷವರ್ಧನ್‌ ಅಭಿಪ್ರಾಯ. ವಿಸಿಟಿಂಗ್‌ ಕಾರ್ಡ್‌ ಬದಲಿಗೆ ಕ್ರೆಡಿಟ್‌ ಕಾರ್ಡ್‌ಗಳನ್ನು ಸಾಕ್ಷ್ಯವನ್ನಾಗಿ ಒದಗಿಸಿಯೂ ಸಾಲ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಅಜಯ್‌ ಪವಾರ್‌ - 022 -826 0511/ 0458, ಈ ಮೇಲ್‌ : [email protected], ಅಲಕಾ ಶರ್ಮಾ, 022- 6196147, ಈ ಮೇಲ್‌ : [email protected], ಅಪ್ನಾ ಲೋನ್‌.ಕಾಮ್‌

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+