Get Updates
Get notified of breaking news, exclusive insights, and must-see stories!

ಕರ್ನಾಟಕಕ್ಕೆ ವಿದ್ಯುತ್‌ ಮಾತ್ರ ದುಬಾರಿ, ತಮಿಳುನಾಡಿಗೋ ಎಲ್ಲಾ ದುಬಾರಿ

ಚೆನ್ನೈ : ಕರ್ನಾಟಕದ ಜನತೆಗೆ ಸರ್ಕಾರದ ದೀಪಾವಳಿ ನಂತರದ ಕೊಡುಗೆ ವಿದ್ಯುತ್‌ ದರ ಏರಿಕೆ. ಅದು ಪ್ರತಿಶತ 13ರಿಂದ 25ರಷ್ಟಾಗಬಹುದು. ಆದರೆ, ತಮಿಳುನಾಡಿನಲ್ಲಿ ಎಣ್ಣೆ, ಅಕ್ಕಿ, ಬಸ್ಸು, ವಿದ್ಯುತ್‌ ಎಲ್ಲದರ ಬೆಲೆ ಒಂದೇ ದಿನ ಏರಿದೆ.

ಅಣ್ಣಾ ಡಿಎಂಕೆಯ ಜಯಲಲಿತಾ ಕೃಪಾ ಪೋಷಿತ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಸರ್ಕಾರ ಬೊಕ್ಕಸದ ನಷ್ಟ ಭರಿಸಲು ಇಟ್ಟಿರುವ ಹೆಜ್ಜೆಯಿದು. ಸಾಲದ್ದಕ್ಕೆ ಸರ್ಕಾರಿ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಮಾಡಲು ಸ್ವಯಂ ನಿವೃತ್ತಿ ಯೋಜನೆಯನ್ನೂ ಜಾರಿಗೆ ತರಲಿದ್ದಾರೆ.

ಪ್ರತಿ ಯೂನಿಟ್‌ಗೆ 75 ಪೈಸೆ ವಿದ್ಯುತ್‌ ದರ ಇರುವ ಕಡೆ ಡೆಸೆಂಬರ್‌ 1ನೇ ತಾರೀಖಿನಿಂದ 1 ರುಪಾಯಿ ಕಟ್ಟಬೇಕು. ಕನಿಷ್ಠ 1.50 ರುಪಾಯಿ ಇರುವ ಬಸ್‌ ಟಿಕೇಟು ದರವನ್ನು 2 ರುಪಾಯಿಗೆ ಏರಿಸಲಾಗಿದೆ. ದೂರದೂರಿನ ಬಸ್ಸುಗಳ ಪ್ರತಿ ಕಿಲೋಮೀಟರ್‌ ದರವನ್ನೂ ಏರಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಕ್ಕಿಯ ಪರಿಷ್ಕೃತ ದರ- ಬಡತನ ರೇಖೆಯಿಂದ ಕೆಳಗಿರುವವರಿಗೆ ಪ್ರತಿ ಕಿಲೋಗೆ 3.50 ರುಪಾಯಿ. ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ಪ್ರತಿ ಕಿಲೋಗೆ 9 ರುಪಾಯಿ. ಸಕ್ಕರೆ : ಪ್ರತಿ ಕಿಲೋಗೆ 13.25 ರುಪಾಯಿ.

ಅಷ್ಟೇ ಅಲ್ಲ ಹಾಲು, ಪೆಟ್ರೋಲು, ಇತರೆ ದಿನಸಿ, ಹತ್ತಿ, ಕಂಪ್ಯೂಟರ್‌ ಸಾಫ್ಟ್‌ವೇರ್‌ ಎಲ್ಲದರ ಮೇಲೂ ತೆರಿಗೆ. ಅಂದಮೇಲೆ, ಇವುಗಳ ದರವೂ ತಂತಾನೇ ಏರಲಿದೆ. ಸರ್ಕಾರಿ ಸಿಬ್ಬಂದಿ ಸಂಖ್ಯೆಯಲ್ಲಿ ಪ್ರತಿಶತ 30ರಷ್ಟು ಕಡಿತ ಮಾಡುವುದಕ್ಕಾಗಿ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ನೇಮಕಾತಿಗಳನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ವಿವಿಧ ಶುಲ್ಕಗಳೂ ಏರಿವೆ. ಮೆಡಿಕಲ್‌ ಸೀಟುಗಳ ಸಂಖ್ಯೆ ಹೆಚ್ಚಿಸಿ, ಅನಿವಾಸಿ ಭಾರತೀಯರಿಗೆ ಪ್ರತಿಶತ 50ರಷ್ಟು ಪೇಮೆಂಟ್‌ ಸೀಟುಗಳನ್ನು ಮೀಸಲಿಡುವ ಮಹಾ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+