Get Updates
Get notified of breaking news, exclusive insights, and must-see stories!

ಗೋಪಾಲ್‌ ಬಂಧನದ ಪ್ರಯತ್ನ ಒಂದು ವದಂತಿ- ತಮಿಳುನಾಡು ಡಿಜಿಪಿ

ಚೆನ್ನೈ : ವದಂತಿಗಳಿಗೆ ಕಿವಿಗೊಡಬೇಡಿ. ನಕ್ಕೀರನ್‌ ಪತ್ರಿಕೆ ಸಂಪಾಕ ಆರ್‌.ಆರ್‌.ಗೋಪಾಲ್‌ ಅವರನ್ನು ಬಂಧಿಸುವ ಪ್ರಯತ್ನಗಳು ಖಂಡಿತ ನಡೆದಿಲ್ಲ ಎಂದು ತಮಿಳುನಾಡು ಡಿಜಿಪಿ ಬಿ.ಪಿ.ನೈವಾಲ್‌ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಪೊಲೀಸರು ನಕ್ಕೀರನ್‌ ಗೋಪಾಲ್‌ ಅವರನ್ನು ಬಂಧಿಸಲು ತಮಿಳುನಾಡಿಗೆ ಬಂದಿದ್ದಾರೆಂಬ ಗುಲ್ಲೆದ್ದಿದೆ. ಅವರು ನಮ್ಮನ್ನು ಸಂಪರ್ಕಿಸದೆ ಯಾರನ್ನೂ ಬಂಧಿಸುವಂತಿಲ್ಲ. ಆದರೆ, ಈವರೆಗೆ ಕರ್ನಾಟಕ ಪೊಲೀಸರಿಂದ ನಮಗೆ ಯಾವುದೇ ಕರೆಯಾಗಲೀ ಸಂದೇಶವಾಗಲೀ ಬಂದಿಲ್ಲ. ವಿನಾ ಕಾರಣ ಯಾರನ್ನೂ ಬಂಧಿಸುವ ಪ್ರಶ್ನೆಯೇ ಇಲ್ಲ ಎಂದು ನೈವಾಲ್‌ ಹೇಳಿದರು.

ಕೊಯಮತ್ತೂರು ವರದಿ : ವೀರಪ್ಪನ್‌ ಹಾಗೂ ಆತನ ತಂಡಕ್ಕೆ ಸಂಬಂಧಿಸಿದ 9 ವಿವಿಧ ಪ್ರಕರಣಗಳ ತನಿಖೆಗೆ ತಮಿಳುನಾಡು ಪೊಲೀಸ್‌ ಇಲಾಖೆ ವಿಶೇಷ ಸಿಬಿ- ಸಿಐಡಿ ಪಡೆ ರಚಿಸಿದ್ದಾರೆ. ಒಬ್ಬ ಹೆಚ್ಚು-ವ-ರಿ ಸೂಪರಿಂಟೆಂಡೆಂಟ್‌, ಮೂವರು ಸೂಪರಿಂಟೆಂಡೆಂಟ್‌ ಹಾಗೂ ಐವರು ಇನ್ಸ್‌ಪೆಕ್ಟರ್‌ಗಳು ತಂಡದಲ್ಲಿದ್ದಾರೆ. ಈರೋಡ್‌ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನಲ್ಲಿ ತನಿಖಾ ತಂಡ ಬೀಡು ಬಿಡಲಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+