‘ಏಷ್ಯನ್ ಉದ್ದಿಮೆ ಬೆಳೆಸಲು ಫೋರಂ ಕಟ್ಟಲು ಥೈಲ್ಯಾಂಡ್ ಉತ್ಸುಕ’
ಬೆಂಗಳೂರು : ಜಾಗತಿಕ ಸಮಸ್ಯೆಗಳನ್ನು ದೃಷ್ಟಿಕೋನಗಳ ವಿನಿಮಯದಿಂದ ಮತ್ತು ಕೊಡುಕೊಳ್ಳುವಿಕೆಯಿಂದ ಬಗೆಹರಿಸುವ ಸಲುವಾಗಿ ಏಷ್ಯಾ ಸಹಕಾರಿ ಸಂವಾದ (ಎಸಿಡಿ) ವೇದಿಕೆಯನ್ನು ಕಟ್ಟಲು ಥೈಲ್ಯಾಂಡ್ ಉತ್ಸುಕವಾಗಿದೆ ಎಂದು ಅಲ್ಲಿನ ಪ್ರಧಾನಿ ತಾಕ್ಸಿನ್ ಶಿನಾವಾತ್ರಾ ಮಂಗಳವಾರ ಹೇಳಿದ್ದಾರೆ.
ಅಂತರ ಏಷ್ಯಾ ಉದ್ದಿಮೆ, ಪ್ರವಾಸೋದ್ಯಮ, ಬಂಡವಾಳ ಹೂಡಿಕೆ ಮತ್ತು ವಿತ್ತೀಯ ಸಹಕಾರ ಅಭಿವೃದ್ಧಿ ಈ ವೇದಿಕೆಯ ಮುಖ್ಯ ಗುರಿ. ಪರಸ್ಪರ ಚರ್ಚಿಸುವುದರಿಂದ ಬಿಕ್ಕಟ್ಟು ನಿವಾರಣೆ ಮಾತ್ರವಲ್ಲದೆ, ಉದ್ದಿಮೆಯ ಹೊಸ ದಾರಿಗಳನ್ನು ಕಂಡುಕೊಳ್ಳುವುದು ಸಾಧ್ಯವಾಗಲಿದೆ ಎಂದು ಭಾರತೀಯ ವಾಣಿಜ್ಯ ಮತ್ತು ಉದ್ದಿಮೆ ಮಂಡಳಿ ಹಾಗೂ ಭಾರತೀಯ ಉದ್ದಿಮೆಗಳ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಶಿನಾವಾತ್ರಾ ಹೇಳಿದರು.
ಉದ್ದಿಮೆಯಲ್ಲಿ ಭಾರತ ಸಾಕಷ್ಟು ಸಾಧಿಸಿದೆ. ಅದರಿಂದ ಥೈಲ್ಯಾಂಡ್ ಕಲಿಯುವುದು ಸಾಕಷ್ಟಿದೆ. ಉದ್ದಿಮೆ, ಬಂಡವಾಳ ಹೂಡಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳು ಕೈಜೋಡಿಸುವ ಸಾಕಷ್ಟು ಅವಕಾಶಗಳಿವೆ. ಭಾರತ ಮಾಹಿತಿ ತಂತ್ರಜ್ಞಾನದ ಸೂಪರ್ ಪವರ್. ಐಟಿ ಕ್ಷೇತ್ರದಲ್ಲಿ ಭಾರತದೊಟ್ಟಿಗೆ ನಾಳೆ ಒಡಂಬಡಿಕೆಯಾಂದಕ್ಕೆ ನಾವು ಸಹಿ ಹಾಕಲಿದ್ದೇವೆ ಎಂದರು.
ಜಾಗತೀಕರಣ ಮಾರುಕಟ್ಟೆಯನ್ನು ವಿಸ್ತರಿಸುವುದರ ಮೂಲಕ ಹೊಸ ಹೊಸ ಅವಕಾಶಗಳನ್ನು ಕಟ್ಟಿ ಕೊಡುತ್ತದೆ ಅನ್ನುವುದು ನಿಜ. ಜೊತೆಗೆ ಭಾರೀ ಸವಾಲುಗಳನ್ನು ದೇಶ ಎದುರಿಸಬೇಕಾಗುತ್ತದೆ. ಪ್ರಾದೇಶಿಕತೆಯ ಕಾಪಿಟ್ಟುಕೊಂಡು ಈ ಕೆಲಸ ಮಾಡಬೇಕಾಗುವುದರಿಂದ, ನೆರೆ ದೇಶಗಳೊಡನೆ ಪ್ರಾದೇಶಿಕತೆಯ ಅಸ್ತಿತ್ವವನ್ನು ಉಳಿಸಿಕೊಂಡು ವ್ಯವಹಾರಿಸುವ ದಾರಿಯನ್ನು ಹಿಡಿಯಬೇಕು ಎಂದು ಶಿನಾವಾತ್ರಾ ಸಲಹೆ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications