ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕೆಯಲ್ಲಿ ವೈಟುಕೆ ಸರಿಸಾಟಿ ಸಮಸ್ಯೆ, ಸಾಫ್ಟ್‌ವೇರ್‌ಗಳಿಗೆ ಬೇಡಿಕೆ

By Staff
|
Google Oneindia Kannada News

ಚೆನ್ನೈ : ಅಮೆರಿಕದಲ್ಲಿ ಭದ್ರತೆಗೆ ಸಂಬಂಧಿಸಿದ ಸೇವೆಗಳ ಸಾಫ್ಟ್‌ವೇರ್‌ಗಳ ಅವಶ್ಯಕತೆ ಹೆಚ್ಚಾಗಿದ್ದು, ಭಾರತದ ಸಾಫ್ಟ್‌ವೇರ್‌ ಕಂಪನಿಗಳಿಗೆ ಭಾರೀ ಸಾಫ್ಟ್‌ವೇರ್‌ ಆರ್ಡರ್‌ಗಳು ದೊರೆಯುವ ಸಂಭವವಿದೆ ಎಂದು ಲೇಸಾರ್‌ ಸಾಫ್ಟ್‌ ಇನ್ಫೋಸಿಸ್ಟಂಸ್‌ನ ಅಧ್ಯಕ್ಷ ಮತ್ತು ಎಂಡಿ ಬಿ.ಎಸ್‌.ಕಾಮತ್‌ ಹೇಳಿದ್ದಾರೆ.

ಸೆಪ್ಟೆಂಬರ್‌ 11ರಂದು ವಿಶ್ವ ವಾಣಿಜ್ಯ ಕಟ್ಟಡಗಳ ಮೇಲೆ ಉಗ್ರರು ನಡೆಸಿರುವ ದಾಳಿಯಿಂದ ವೈಟುಕೆ ಸಮಸ್ಯೆಯಷ್ಟೇ ಗಂಭೀರ ಸ್ವರೂಪದ ಬಿಕ್ಕಟ್ಟುಗಳು ಉದ್ಭವಿಸಿವೆ. ದಾಳಿಯಿಂದಾಗಿ ಅವಳಿ ಕಟ್ಟಡಗಳಲ್ಲಿದ್ದ ಅನೇಕ ಕಂಪನಿಗಳ ಅಂಕಿ- ಅಂಶ, ಲೇವಾದೇವಿ ವಗೈರೆ ಮಾಹಿತಿಗಳು ಕಳೆದುಹೋಗಿವೆ. ಏಕೈಕ ಸರ್ವರ್‌ನಲ್ಲಿ ಅವುಗಳನ್ನು ಸಂಗ್ರಹಿಸಿಡಲಾಗಿತ್ತು. ಯಾವುದೇ ಬ್ಯಾಕ್‌ಅಪ್‌ ಇರಲಿಲ್ಲ. ಈಗ ಈ ರೀತಿ ಒಂದೇ ಒಂದು ಸರ್ವರ್‌ ಇರುವ ಕಂಪನಿಗಳು ಸ್ಟ್ಯಾಂಡ್‌ಬೈ ಸರ್ವರ್‌ಗಳನ್ನು ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಭಾರತಕ್ಕೆ ಸಾಕಷ್ಟು ಸಾಫ್ಟ್‌ವೇರ್‌ ಆರ್ಡರ್‌ಗಳು ಹರಿದು ಬರಲಿವೆ ಎಂದು ಕಾಮತ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಬಾರಿ ವೈಟುಕೆ ಸಮಸ್ಯೆ ತಲೆದೋರಿದ ಅಂದಿಗಿಂತ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಗ ಸರಿಯಾದ ವ್ಯಾಪಾರವಿಲ್ಲದ ಕಾರಣ ಇಂಟರ್ನೆಟ್‌ ಮೇಲೆ ಹಣ ಸುರಿಯಲಾಗಿತ್ತು. ಆದರೀಗ ಬ್ಯಾಕ್‌ಅಪ್‌ ಸಾಫ್ಟ್‌ವೇರ್‌ಗಳಿಗೆ ಹೆಚ್ಚು ಬೇಡಿಕೆ ಬರಲಿದೆ. ಇದೇ ಸಮಯದಲ್ಲಿ ಕಳಪೆ ಸಾಫ್ಟ್‌ವೇರ್‌ ಸೇವೆ ಕಂಪನಿಗಳು ಹಣ ಮಾಡಿಕೊಳ್ಳುವ ಭಯವೂ ಉಂಟು ಎಂದರು

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X