ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಲು ಆಲಯದೊಳಗೆ ಚಿನ್ನ ಗೆದ್ದ ನಮ್ಮ ಹುಡುಗ

By Staff
|
Google Oneindia Kannada News

ಗುಲ್ಬರ್ಗಾ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಏರ್ಪಡಿಸಿದ್ದ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ನಮ್ಮ ಸಂಪಾದಕೀಯ ಬಳಗದ ರಘುನಾಥ ಚ. ಹ. ಚಿನ್ನದ ಪದಕ ಪಡೆದಿದ್ದಾರೆ.

ಕನ್ನಡ.ಇಂಡಿಯಾಇನ್‌ಫೋ.ಕಾಂನಲ್ಲಿ ಹಿರಿಯ ಉಪ ಸಂಪಾದಕರಾಗಿರುವ ರಘುನಾಥ ಚ.ಹ. ಅವರ ‘ಬಯಲು ಆಲಯದೊಳಗೆ’ ಕಥೆಗೆ ಪ್ರಥಮ ಪ್ರಶಸ್ತಿ ಲಭ್ಯವಾಗಿದೆ. ಗುಲ್ಬರ್ಗಾದಲ್ಲಿ ನ. 28ರ ಬುಧವಾರ ಸೆನೆಟ್‌ ಸಭಾಂಗಣದಲ್ಲಿ ನಡೆವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುಲ್ಬರ್ಗಾ ವಿವಿಯ ಪ್ರಸಾರಾಂಗ ನಿರ್ದೇಶಕರಾದ ಡಾ. ಡಿ.ಬಿ. ನಾಯಕ ತಿಳಿಸಿದ್ದಾರೆ.

ಕುಲಪತಿಗಳಾದ ಪ್ರೊ. ಎಂ.ವಿ. ನಾಡಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆವ ಕಾರ್ಯಕ್ರಮದಲ್ಲಿ ಡಾ. ಶರಣಬಸವಪ್ಪ ಅಪ್ಪ ಹಾಗೂ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಲಕ್ಕಪ್ಪ ಗೌಡ ಅವರು ಪಾಲ್ಗೊಳ್ಳುವರೆಂದು ಅವರು ತಿಳಿಸಿದ್ದಾರೆ.

2000 ಸಾಲಿನ ಪ್ರಮಾಣ ಪತ್ರಕ್ಕೆ ಪಾತ್ರವಾದ ಇತರ ಕಥೆಗಳು:

ಬೀದರ್‌ನ ಮಲ್ಲಿಕಾರ್ಜುನ ಆಮ್ಟೆ ವಿರಚಿತ ‘ಬರ’, ದೇವದುರ್ಗದ ಶಂಕರರಾವ್‌ ಉಬಾಳೆ ಅವರ ‘ನೀರಿಗೆ ಪಾಚಿ ವೈರಿ’, ಬಿದರದ ಗುರುವಾಥ ಅಕ್ಕಣ್ಣ ಅವರ ‘ನೀ ಮಾಯೆಯಾಳಗೋ ನಿನ್ನೊಳು ಮಾಯೆಯೋ’, ಬೆಂಗಳೂರಿನ ಜಯತೀರ್ಥರ ‘ಇರುವುದೆಲ್ಲವ ಬಿಟ್ಟು’ ಹಾಗೂ ಶಿವಮೊಗ್ಗದ ಶಿ.ಜು. ಪಾಶಾರ ‘ಕೆರೆಯಂಗಳದ ನವಾಬ’.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X