Get Updates
Get notified of breaking news, exclusive insights, and must-see stories!

ಗೋಪಾಲ್‌ ಬಂಧನಕ್ಕೆ ಯತ್ನಿಸದಂತೆ ಚೆನ್ನೈ ಪತ್ರಕರ್ತರ ಎಚ್ಚರಿಕೆ

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ಗೆ ನೆರವಾಗುತ್ತಿದ್ದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಬಂಧಿಸಿರುವ ನಕ್ಕೀರನ್‌ ವರದಿಗಾರ ಶಿವಸುಬ್ರಹ್ಮಣ್ಯನ್‌ ಬಿಡುಗಡೆಗೆ ಒತ್ತಾಯಿಸಿ ತಮಿಳುನಾಡು ಪತ್ರಕರ್ತರು ಮಂಗಳವಾರ ಬೆಂಗಳೂರಿನಲ್ಲಿ ಒಂದು ಗಂಟೆಕಾಲ ಪ್ರದರ್ಶನ ನಡೆಸಿದರು.

ಚೆನ್ನೈನ ನಾಲ್ಕು ಮೀಡಿಯಾ ಸಂಘಟನೆಗಳ ಪತ್ರಕರ್ತರು ಬೆಂಗಳೂರಿನ ಸರಕಾರಿ ಅತಿಥಿಗೃಹದ ಎದುರು ಪ್ರತಿಭಟನೆ ನಡೆಸಿ, ನಕ್ಕೀರನ್‌ ವರದಿಗಾರ ಶಿವಸುಬ್ರಹ್ಮಣ್ಯನ್‌ನನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಮದ್ರಾಸ್‌ ಯೂನಿಯನ್‌ ಆಫ್‌ ಜರ್ನಲಿಸ್ಟ್ಸ್‌, ಚೆನ್ನೈ ಪ್ರೆಸ್‌ ಕ್ಲಬ್‌, ಜರ್ನಲಿಸ್ಟ್ಸ್‌ ಆ್ಯಕ್ಷನ್‌ ಗ್ರೂಪ್‌ ಮತ್ತು ಮದ್ರಾಸ್‌ ರಿಪೋರ್ಟರ್ಸ್‌ ಗಿಲ್ಡ್‌ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಪತ್ರಕರ್ತರು ಶಿವಸುಬ್ರಹ್ಮಣ್ಯನ್‌ನನ್ನು ಬಂಧಿಸಿರುವ ಕರ್ನಾಟಕ ಪೊಲೀಸರ ಕ್ರಮವನ್ನು ಖಂಡಿಸಿದರು. ಶಿವಸುಬ್ರಹ್ಮಣ್ಯನ್‌ ಅವರನ್ನು ಕರ್ನಾಟಕ ಕಾಡಿನಲ್ಲಿ ಬಂಧಿಸಲಾಗಿದೆ ಎಂಬುದು ಸುಳ್ಳು. ವಾಸ್ತವವಾಗಿ ಅವರನ್ನು ಸೇಲಂ ಜಿಲ್ಲೆಯ ಅವರ ಮನೆ ಬಳಿಯಿಂದ ಅಪಹರಿಸಿ ತರಲಾಗಿದೆ ಎಂದೂ ಆರೋಪಿಸಿದರು.

ಕರ್ನಾಟಕ ಪೊಲೀಸರ ವರ್ತನೆ ಕಾನೂನು ಬಾಹಿರವಾಗಿದ್ದು, ಸರ್ವೋನ್ನತ ನ್ಯಾಯಾಲಯದ ನೀತಿಸಂಹಿತೆಗೆ ವಿರುದ್ಧವಾಗಿದೆ ಎಂದು ತಮಿಳುನಾಡಿನ ಪತ್ರಕರ್ತರು ಆಪಾದಿಸಿದರು. ನಕ್ಕೀರನ್‌ ಪತ್ರಿಕೆಯ ಸಂಪಾದಕ ಆರ್‌.ಆರ್‌. ಗೋಪಾಲ್‌ರನ್ನು ಬಂಧಿಸಿದರೆ, ಪರಿಣಾಮ ನೆಟ್ಟಗಾಗದು ಎಂದೂ ಅವರು ಎಚ್ಚರಿಕೆ ನೀಡಿದರು.

ಗೋಪಾಲ್‌ರನ್ನು ಬಂಧಿಸಲು ಯತ್ನಿಸಿದರೆ, ತಮಿಳುನಾಡು ಹಾಗೂ ಪಾಂಡಿಚೇರಿಯ ಎಲ್ಲ ಮಾಧ್ಯಮ ಪ್ರತಿನಿಧಿಗಳ ತೀವ್ರ ಪ್ರತಿರೋಧ ಎದುರಿಸಬೇಕಾದೀತು ಎಂದು ಪ್ರತಿಭಟನೆಕಾರರು ಹೇಳಿದರು. ಶಿವಸುಬ್ರಹ್ಮಣ್ಯನ್‌ ಬಿಡುಗಡೆ ಆಗದಿದ್ದರೆ, ಡಿಸೆಂಬರ್‌ 3ರಂದು ಚೆನ್ನೈನಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನಿಗಮದ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿಯೂ ಅವರು ತಿಳಿಸಿದರು.

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+