Get Updates
Get notified of breaking news, exclusive insights, and must-see stories!

ದೂರವಾಣಿ ಮೂಲಕ ಹಳ್ಳಿಗಳತ್ತ ನಾರಾಯಣ ಹೃದಯಾಲಯ

ಬೆಂಗಳೂರು : ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಂದ ನಾರಾಯಣ ಹೃದಯಾಲಯಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕಂಪ್ಯೂಟೆಕ್‌ ಇಂಡಿಯಾದ ಸಹಯೋಗದೊಂದಿಗೆ ಆಸ್ಪತ್ರೆಯು ಹಮ್ಮಿಕೊಂಡಿದೆ.

ಟೆಲಿಫೋನ್‌ ಲೈನ್‌ ಹಾಗೂ ಇಸಿಜಿ ಜಾಲದ ಮುಖಾಂತರ ರಾಜ್ಯದ ಎಲ್ಲ ವೈದ್ಯರೂ ಈ ಯೋಜನೆಯಡಿಯಲ್ಲಿ ನಾರಾಯಣ ಹೃದಯಾಲಯವನ್ನು ಸಂಪರ್ಕಿಸಬಹುದು. ನಾರಾಯಣ ಹೃದಯಾಲಯ 24 ಗಂಟೆಗಳ ಸೇವೆಯನ್ನು ಒದಗಿಸಲಿದೆ. ಈ ಯೋಜನೆಗೆ ಪೂರಕವಾಗಿ ರಾಜ್ಯದ ಎಲ್ಲ ಗ್ರಾಮಪಂಚಾಯತ್‌ಗಳಿಗೂ ಎಲೆಕ್ಟ್ರೋಕಾರ್ಡಿಯೋಗ್ರಾಮ್‌ ಯಂತ್ರವನ್ನು ನೀಡಲಾಗುವುದು.

ಹೃದಯ ಚಿಕಿತ್ಸೆ ನೀಡಲು ಗ್ರಾಮೀಣ ಪ್ರದೇಶದಲ್ಲಿರುವ ವೈದ್ಯರು ಅಗತ್ಯ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು , ಅವರು ನಾರಾಯಣ ಹೃದಯಾಲಯವನ್ನು ಸಂಪರ್ಕಿಸಿ ಮಾಹಿತಿ ಮಾರ್ಗದರ್ಶನ ಪಡೆಯಬಹುದು ಎಂದು ಹೃದಯಾಲಯದ ಡಾ. ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು ಹನ್ನೆರಡಕ್ಕೂ ಹೆಚ್ಚು ಫೋನ್‌ಗಳನ್ನು ಆಳವಡಿಸಿದ್ದು, ಫೋನ್‌ ಕರೆಗಳನ್ನು ನಿರ್ವಹಿಸಲು ನುರಿತ ವೈದ್ಯರನ್ನು ನೇಮಿಸಲಾಗುವುದು.

ಪ್ರಾರಂಭದಲ್ಲಿ ಬೆಂಗಳೂರು, ಹೊನ್ನಾವರ, ಕುಂದಾಪುರ ಮತ್ತು ಮಂಗಳೂರು ಗ್ರಾಮ ಪಂಚಾಯತ್‌ಗಳಿಗೆ ಇಸಿಜಿಯನ್ನು ಒದಗಿಸಲಾಗುವುದು. ಮುಂದಿನ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳನ್ನೂ ಒಂದೇ ನೆಟ್‌ವರ್ಕ್‌ನಡಿ ತರಲಾಗುವುದು ಎಂದು ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+