ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಥ್ರಾಕ್ಸ್‌ನಿಂದ 3 ವರ್ಷದಲ್ಲಿ ಸತ್ತ ದನಕರುಗಳ ಸಂಖ್ಯೆ 479

By Staff
|
Google Oneindia Kannada News

ನವದೆಹಲಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆಂಥ್ರಾಕ್ಸ್‌ ರೋಗದಿಂದ ದೇಶದಲ್ಲಿ ಬಲಿಯಾದ ಜಾನುವಾರುಗಳ ಸಂಖ್ಯೆ ಎಷ್ಟು ಗೊತ್ತೆ? 479 ಎನ್ನುತ್ತವೆ ವರದಿಗಳು. ಈ ವಿಷಯವನ್ನು ಕೇಂದ್ರ ಕೃಷಿ ಸಚಿವ ಹುಕುಂದೇವ್‌ ನಾರಾಯಣ್‌ ಯಾದವ್‌ ಲೋಕಸಭೆಗೆ ತಿಳಿಸಿದ್ದಾರೆ.

ಇಂದು ದೇಶವನ್ನೇ ಆತಂಕಕ್ಕೆ ಈಡು ಮಾಡಿರುವ ಆಂಥ್ರಾಕ್ಸ್‌ ವಿಷಯ ಚರ್ಚೆಗೆ ಬಂದಾಗ, ಲಿಖಿತ ಉತ್ತರ ನೀಡಿದ ಸಚಿವರು, ಮೂರು ವರ್ಷಗಳ ಅವಧಿಯಲ್ಲಿ ಆಂಥ್ರಾಕ್ಸ್‌ ಸೋಂಕಿಗೆ ಬಲಿಯಾದ ದನಕರುಗಳ ವಿವರ ನೀಡಿದರು. ಮಾರಕವಾದ ಈ ರೋಗವನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

ರೋಗ ನಿಯಂತ್ರಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದೂ ಯಾದವ್‌ ತಿಳಿದ್ದಾರೆ.

ಕರ್ನಾಟಕದಲ್ಲಿ 1983ರಿಂದಲೂ ಆಂಥ್ರಾಕ್ಸ್‌ಗೆ ಹಲವು ಜಾನುವಾರುಗಳು ಸಾವನ್ನಪ್ಪಿವೆ. ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಇಬ್ಬರು ಈ ರೋಗಕ್ಕೆ ಬಲಿಯಾಗಿದ್ದರು. ಇಲ್ಲಿ 20 ಕುರಿ, ಒಂದು ಎತ್ತು ಮತ್ತು ಎರಡು ಹಸುಗಳೂ ಸಾವನ್ನಪ್ಪಿದ್ದವು ಎಂಬುದನ್ನು ಸ್ಮರಿಸಬಹುದಾಗಿದೆ.

(ಪಿ.ಟಿ.ಐ/ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X