ರಾಜ್ ಬಿಡುಗಡೆಗೆ ನೀಡಿದ್ದು 10 ಕೋಟಿ ರು:ಪೊಲೀಸರ ಶಂಕೆ
ಬೆಂಗಳೂರು : ರಾಜ್‌ಕುಮಾರ್ ಅಪಹರಣವಾಗಿದ್ದ ಸಮಯದಲ್ಲಿ ವರನಟನ ಬಿಡುಗಡೆಗೆ ಕಾಡುಗಳ್ಳ ವೀರಪ್ಪನ್ ಕೋಟಿಗಟ್ಟಲೆ ಹಣ ಕೇಳಿದ್ದ ಎಂಬ ಗುಸುಗುಸು ಇತ್ತು. ಈಗ ರಾಜ್‌ರನ್ನು ಬಂಧನದಿಂದ ಬಿಡಿಸಲು ಕನ್ನಡ ಚಿತ್ರ ನಿರ್ಮಾಪಕರು ಭಾರಿ ಮೊತ್ತ ನೀಡಿದ್ದಾರೆ ಎಂಬ ಒಂದೆಳೆಯ ಸುಳಿವು ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಎಸ್.ಟಿ.ಎಫ್. ಪೊಲೀಸರು, ಸೋಮವಾರದಿಂದಲೇ ರಾಜ್ಯದ ಪ್ರತಿಷ್ಠಿತ ನಿರ್ಮಾಪಕರನೇಕರೊಂದಿಗೆ ಮಾತುಕತೆ ಹೆಸರಿನಲ್ಲಿ ವಿಚಾರಣೆ ನಡೆಸುವ ಸಾಧ್ಯತೆಗಳು ನಿಚ್ಚಳವಾಗಿವೆ. ರಾಜ್ ವೀರಪ್ಪನ್ ಒತ್ತೆಯಾಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ದೊಡ್ಡ ಪ್ರಮಾಣದ ಹಣ ಪಡೆದಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ರಾಜ್‌ರನ್ನು ಬಿಡುಗಡೆ ಮಾಡಿಸಲು, ಚಿತ್ರ ನಿರ್ಮಾಪಕರು ಹಣ ಸಂಗ್ರಹಿಸಿ ನೀಡಿದ್ದಾರೆ ಎಂದು ಶಂಕಿಸಿರುವ ಪೊಲೀಸರು, ಅಪಹರಣ -ಬಿಡುಗಡೆಯ ನಡುವೆ ಭಾರಿ ಪ್ರಮಾಣದ ಹಣಕಾಸಿನ ವ್ಯವಹಾರ ನಡೆದಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ವೀರಪ್ಪನ್‌ನ ಬಂಟ ಸೇತುಕುಳಿ ಗೋವಿಂದನ್‌ನ ಬಂಧುಗಳಿಂದ ಐದು ಲಕ್ಷ ರುಪಾಯಿಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸರಿಗೆ ಈ ಬಗ್ಗೆ ಶಂಕೆ ಬಲವಾಗಿದೆ. ಈ ಹಣ ರಾಜ್ ಅಪಹರಣ ಕಾಲದಲ್ಲಿ ವೀರಪ್ಪನ್‌ಗೆ ದೊರೆತಿದೆ ಎಂದು ಅವರು ನಂಬಿದ್ದಾರೆ.
ಈ ಹಣದಿಂದಲೇ ವೀರಪ್ಪನ್ ನಕ್ಕಿರನ್ ಪತ್ರಿಕೆಯ ವರದಿಗಾರ ಶಿವಸುಬ್ರಹ್ಮಣ್ಯ ಮೂಲಕ ಮೊಬೈಲ್ ಫೋನ್ ಸೇರಿದಂತೆ ಅತ್ಯಾಧುನಿಕ ಉಪಕರಣ ಖರೀದಿಸಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ. ಹತ್ತಿರ ಹತ್ತಿರ ಹತ್ತು ಕೋಟಿ ರುಪಾಯಿಗಳನ್ನು ಕನ್ನಡ ಚಿತ್ರೋದ್ಯಮಿಗಳು ಸಂಗ್ರಹಿಸಿ, ವೀರಪ್ಪನ್‌ಗೆ ಕೊಟ್ಟಿರಬಹುದು ಎಂಬುದು ಪೊಲೀಸರ ಲೆಕ್ಕಾಚಾರ.
ಆದರೆ, ಇದಕ್ಕೆ ಬಲವಾದ ಹಾಗೂ ಪೂರಕವಾದ ದಾಖಲೆಗಳು ಪೊಲೀಸರಿಗೆ ಈವರೆಗೆ ಸಿಕ್ಕಿಲ್ಲ. ದೊರೆತಿರುವ ಒಂದೇ ಒಂದು ಸುಳಿವಿನ (ಬ್ಯಾಂಕ್ ವಹಿವಾಟು) ಆಧಾರದ ಮೇಲೆ ಹೆಚ್ಚಿನ ವಿಷಯವನ್ನು ಹೆಕ್ಕಿ ತೆಗೆಯಲು ಅವರು ಹರಸಾಹಸ ಮಾಡುತ್ತಿದ್ದಾರೆ. ವೀರಪ್ಪನ್ ಶಿಕಾರಿ ಸಂದರ್ಭದಲ್ಲಿ ಎಸ್.ಟಿ.ಎಫ್. ಸುಮಾರು 12 ಲಕ್ಷ ರುಪಾಯಿ ವಶಪಡಿಸಿಕೊಂಡಿದ್ದು, ಈ ಶಂಕೆಗೆ ಪುಷ್ಟಿ ನೀಡಿದೆ.
(ಇನ್‌ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications