ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಮಕ್ಕಳ ಹೆತ್ತ ದಾಖಲೆಗಾಗಿ ಹೋರಾಡುತ್ತಿರುವ ದಂಪತಿಗೆ ಗುಡ್‌ ಲಕ್‌!

By Staff
|
Google Oneindia Kannada News

ಗಿನ್ನೆಸ್‌ ದಾಖಲೆ ಮಾಡಬೇಕು ಅಂತ ಯಾರಿಗೆ ಆಸೆ ಇರುವುದಿಲ್ಲ ಹೇಳಿ. ಕೂದಲು ಸೀಳಿ ಚಿತ್ರ ಬಿಡಿಸಿದವ, ಅಕ್ಕಿ ಕಾಳಿಲ್ಲಿ ಅಕ್ಕರ ಕೆತ್ತಿದವ, ಭಯವಾಗುವ ಹಾಗೆ ಉದ್ದುದ್ದ ಉಗುರು ಬಿಟ್ಟವರು, ಮೀಸೆಯನ್ನೇ ಕತ್ತರಿಸದೆ ರೆಕಾರ್ಡ್‌ ಮಾಡಿಕೊಂಡವರು ಊಹ್‌ ... ಏನೇನು ವಿಚಿತ್ರ ದಾಖಲೆಗಳು. ಹೀಗೆ ಅತೀ ಹೆಚ್ಚು ಸಂಖ್ಯೆಯ ಮಕ್ಕಳನ್ನ ಹುಟ್ಟಿಸಿ ದಾಖಲೆ ಸ್ಥಾಪಿಸುವುದಕ್ಕೆ ಆಗುವುದಿಲ್ಲವೇ...?

‘ಯಾಕಿಲ್ಲ ಟ್ರೆೃ ಮಾಡಿ ನೋಡು ಮಾರಾಯ ...’ ಅಂತ ಉತ್ತರ ಪ್ರದೇಶದ ಹಳ್ಳಿಯಾಂದರಲ್ಲಿ ಯುವಕರು ಪ್ರಶ್ನೆ ಕೇಳಿದವನನ್ನು ಜೋಕು ಮಾಡಿದರು. ಸರಿ. ಆತ ಪ್ರಾಜೆಕ್ಟ್‌ ಶುರು ಮಾಡಿಯೇ ಬಿಡುವುದಾ... ಈಗ ಆತ ತನ್ನ 23ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ. ಪ್ರಾಯ 54. ಗಂಡನ ದಾಖಲೆ ಸಾಹಸದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಹೆಂಡತಿಗೆ ಈಗ 47 ವರ್ಷ ವಯಸ್ಸು. ತುಂಬು ಬಸುರಿ.

ಕೂಲಿ ಕೆಲಸವನ್ನೇ ನಂಬಿದ ಅವರದು ಬಡ ಕುಟುಂಬ. ನಮ್ಮದೂ ವಿಶ್ವ ದಾಖಲೆಯಾಗುತ್ತದೆ. ಸಾಕಷ್ಟು ಹಣ ಬರುತ್ತದೆ. ಸಂಸಾರಕ್ಕೆ ಬರಲಿರುವ ಒಳ್ಳೇ ದಿನಕ್ಕೆ ಆ ಕುಟುಂಬ ಕಾಯುತ್ತಿದೆ. ಹುಟ್ಟಿದ 22 ಮಕ್ಕಳಲ್ಲಿ ಕೈಗೆ ದಕ್ಕಿರುವುದು 15. ಕೈಕಾಲು ಗಟ್ಟಿಯಾದವರು ಹೊಲದಲ್ಲಿ ದುಡಿಯುತ್ತಿದ್ದಾರೆ ಅಂತ ಏಷ್ಯನ್‌ ಏಜ್‌ ಪತ್ರಿಕೆ ವರದಿ ಮಾಡಿದೆ.

ಹೆಚ್ಚು ಮಕ್ಕಳಾದ ಹಾಗೆ ಕುಟುಂಬದ ಆದಾಯವೂ ಹೆಚ್ಚುತ್ತದೆ. ಖ್ಯಾತಿಯೂ ಬರುತ್ತದೆ ಎಂಬ ಒಂದೇ ಕಲ್ಲಿಗೆ ಎರಡು ಹಕ್ಕಿಯ ತತ್ವ ಈ ಗಂಡ ಹೆಂಡಿರದು. ಸ್ಥಳೀಯ ರಾಜಕಾರಣಿಗಳು ಈ ದಂಪತಿಗೆ ಬುದ್ಧಿ ಹೇಳಿದ್ದು ಏನೂ ಪ್ರಯೋಜನವಾಗಲಿಲ್ಲ. 1976ರರಿಂದ ಮಕ್ಕಳ ದಾಖಲೆಗಾಗಿ ಇವರು ಶ್ರಮಿಸುತ್ತಿದ್ದಾರೆ.

ನಿಜವಾಗಿಯೂ ದಾಖಲೆ ಇವರ ಪಾಲಿನದ್ದಾಗಲಿದೆಯೇ ಅಥವಾ ಇವರು ಇನ್ಯಾರದೋ ದಾಖಲೆಯನ್ನು ಮುರಿಯಬೇಕಾಗಿದೆಯೇ ಎನ್ನುವುದು ಗೊತ್ತಾಗಿಲ್ಲ.

(ಇನ್ಫೋ ವಾರ್ತೆ)

ನೀವೇನು ಹೇಳುತ್ತೀರಿ ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X