ಗುಜರಾತ್‌ನ ಭುಜ್‌ನಲ್ಲಿ ಕಂಪಿಸಿದ ಭೂಮಿ, ಮರುಕಳಿಸಿದ ನೆನಪು

ನವದೆಹಲಿ : ಗುಜರಾತ್‌ನ ಭುಜ್‌ ಪ್ರಾಂತ್ಯದಲ್ಲಿ ಶನಿವಾರ ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಿಕ್ಟರ್‌ ಮಾಪಕದಲ್ಲಿ 4.2 ತೀವ್ರತೆಯನ್ನು ಭೂಕಂಪ ಹೊಂದಿತ್ತು ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ. ಈ ಭೂಕಂಪದಲ್ಲಿ ಯಾವುದೇ ಆಸ್ತಿಪಾಸ್ತಿ ಹಾಗೂ ಜೀವ ಹಾನಿ ಸಂಭವಿಸಿರುವ ವರದಿಯಾಗಿಲ್ಲ . ಜನವರಿ 26, ಗಣರಾಜ್ಯೋತ್ಸವದ ದಿನ ಸಂಭವಿಸಿದ ಶತಮಾನ ಕಂಡರಿಯದ ಭಾರೀ ಭೂಕಂಪದಿಂದ ಭುಜ್‌ ತತ್ತರಿಸಿತ್ತು . ಇನ್ನೂ ಆ ಆಘಾತದಿಂದ ಚೇತರಿಸಿಕೊಳ್ಳದ ಭುಜ್‌ ಜನತೆಗೆ ಶನಿವಾರದ ಭೂಕಂಪ ಆತಂಕ ತಂದರೂ, ಭೂಕಂಪದ ತೀವ್ರತೆ ಹೆಚ್ಚಾಗಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಕಳೆದ ಜನವರಿ ತಿಂಗಳಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು ಹಾಗೂ ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದರು. ಭೂಕಂಪ ಸಂತ್ರಸ್ತರ ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿದ್ದು , ಪರಿಹಾರ ಕಾರ್ಯಗಳಿಗಾಗಿ ಕರ್ನಾಟಕದ ವಿಪ್ರೋ ಟೆಕ್ನಾಲಜೀಸ್‌ ಲಿಮಿಟೆಡ್‌ನ ಉದ್ಯೋಗಿಗಳು ಇತ್ತೀಚೆಗೆ 1 ಕೋಟಿ ರುಪಾಯಿ ದೇಣಿಗೆ ನೀಡಿದ್ದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+