ನಗರದ 1400 ಠಕ್ಕರ ಶರಣಾಗತಿಗೆ ಸಾಂಗ್ಲಿಯಾನ ಡೆಡ್‌ಲೈನ್
ಬೆಂಗಳೂರು : ನವೆಂಬರ್ 24ರ ಶನಿವಾರ 3 ಗಂಟೆಯಾಳಗೆ ನೀವಾಗೇ ಬಂದು ಶರಣಾದರೆ, ನನ್ನ ಮಿತಿಯಲ್ಲಿ ನಿಮಗೆ ಬೇಕಾದ ಎಲ್ಲಾ ಸಹಾಯ ಮಾಡುತ್ತೇನೆ. ಸಾಮಾನ್ಯ ಕ್ರಿಮಿನಲ್‌ಗಳ ಪಟ್ಟಿಯಿಂದ ನಿಮ್ಮ ಹೆಸರು ಕಿತ್ತು ಹಾಕುತ್ತೇನೆ. ಎಲ್ಲರಂತೆ ಬದುಕಲು ಬಿಡುತ್ತೇನೆ. ನಗರದ 1400 ಠಕ್ಕರು, ಸುಲಿಗೆಕೋರರಿಗೆ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಕೊಟ್ಟಿರುವ ಡೆಡ್‌ಲೈನ್ ಇದು.
ಈ 1400 ಮಂದಿ ಕೆಲವು ವರ್ಷಗಳ ಹಿಂದೆ ಸತ್ತ ಕೋಳಿ ಫಯಾಜ್, ಜೈರಾಜ್ ಮತ್ತು ರಾಜೇಂದ್ರನಷ್ಟು ಖತರ್ನಾಕ್ ಅಲ್ಲ. ಆದರೆ ಪದೇ ಪದೇ ತಪ್ಪೆಸಗುತ್ತಾ, ನಾಗರಿಕರಿಗೆ ತಲೆನೋವಾಗಿದ್ದಾರೆ. ಮನೆಯಿಂದ ಹೊರಕ್ಕೆ ಎಳೆದು ಹಾಕುವುದು, ಜೂಜು ಆಡುವುದು, ಮಂಕುಬೂದಿ ಎರಚಿ ಮೋಸ ಮಾಡುವುದು ಈ 1400 ಮಂದಿಯ ಕಾಯಕ. ಮೊದಲ ಬಾರಿಗೆ ತಪ್ಪೆಸಗುವ ವ್ಯಕ್ತಿ ರೌಡಿಯಲ್ಲ. ಅದನ್ನೇ ಚಾಳಿ ಮಾಡಿಕೊಂಡವ ರೌಡಿ. ಯಾರದೋ ಕುಮ್ಮಕ್ಕಿನಿಂದಲೇ ಇಂಥಾ ಕೃತ್ಯಕ್ಕೆ ಇವರು ಇಳಿದಿರುತ್ತಾರೆ ಎಂದು ಸಾಂಗ್ಲಿಯಾನ ಹೇಳಿದರು.
ಭಂಡತನ ಇವರಲ್ಲಿ ಭರ್ತಿ. ಕಾನೂನು ಮತ್ತು ಸುವ್ಯವಸ್ಥೆಯ ನಡುವೆಯೇ ನಸುಗುನ್ನಿಗಳಂತಿರುವ ಈ 1400 ಮಂದಿಯನ್ನು ದಾರಿಗೆ ತರುವ ಉದ್ದಿಶ್ಯದಿಂದ ಈ ಡೆಡ್‌ಲೈನ್. ವಿಜಯನಗರ, ಮಲ್ಲೇಶ್ವರಂ, ಕೆಂಗೇರಿ ಗೇಟ್ ಮತ್ತು ಚಿಕ್ಕಪೇಟೆಯಲ್ಲಿ ಇಂಥವರ ಸಂಖ್ಯೆ ಹೆಚ್ಚಾಗಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನ ವಾಚ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications