Get Updates
Get notified of breaking news, exclusive insights, and must-see stories!

ಮಂಗಳೂರಿನಲ್ಲಿ ಕೇಬಲ್‌ ಟೀವಿ ಬಳಕೆದಾರರಿಂದ ಸತ್ಯಾಗ್ರಹ

ಮಂಗಳೂರು : ತಿಂಗಳ ಹಿಂದೆ ನಗರದಲ್ಲಿ ಆರಂಭವಾದ ಕೇಬಲ್‌ ಟಿವಿ ಬಳಕೆದಾರರು ಮತ್ತು ಏಜೆನ್ಸಿಗಳ ನಡುವಿನ ಜಟಾಪಟಿ ಈಗ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದೆ.

ಇತ್ತೀಚೆಗಷ್ಟೇ ಹುಟ್ಟಿಕೊಂಡಿರುವ ಕೇಬಲ್‌ ಟೀವಿ ಬಳಕೆದಾರರ ಹಿತರಕ್ಷಣಾ ವೇದಿಕೆ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ, ಕೇಬಲ್‌ ಟಿವಿ ವೀಕ್ಷಕರ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸತ್ಯಾಗ್ರಹವನ್ನು ಗುರುವಾರ ಸಾಂಕೇತಿಕವಾಗಿ ನಡೆಸಿದವು.

ಹಿರಿಯ ಬಳಕೆದಾರರ ಹಿತರಕ್ಷಣಾ ಹೋರಾಟಗಾರ, ಪ್ರೊ. ನರೇಂದ್ರನಾಯಕ್‌ ನೇತೃತ್ವದಲ್ಲಿ ಸತ್ಯಾಗ್ರಹ ನಡೆಯಿತು. ವೀಕ್ಷಕರ ಸಮಸ್ಯೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳು ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.

ಕೇಬಲ್‌ ಟೀವಿ ವೀಕ್ಷಕರಿಗೆ ಮಾಸಿಕ ಶುಲ್ಕವನ್ನು 130 ರೂಪಾಯಿಯಿಂದ 150 ರೂಪಾಯಿಗೇರಿಸಿರುವುದರ ವಿರುದ್ಧ ಈ ಹೋರಾಟ ಆರಂಭವಾಗಿತ್ತು. ಕೇಬಲ್‌ ಟಿವಿ ವೀಕ್ಷಕರ ಸಂಖ್ಯೆ ಮತ್ತು ಚಾನೆಲ್ಲುಗಳಿಗೆ ಏಜೆಂಟರು ಕಟ್ಟಬೇಕಾದ ಮೊತ್ತದ ವಿವರಣೆ ನೀಡಬೇಕೆಂಬುದು ವೀಕ್ಷಕರ ಒತ್ತಾಯ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+