Get Updates
Get notified of breaking news, exclusive insights, and must-see stories!

ಆದಿಚುಂಚನಗಿರಿಬಾಲಗಂಗಾಧರನಾಥ ಸ್ವಾಮೀಜಿಗೆ ವಿಶ್ವಗುರು ಪ್ರಶಸ್ತಿ

ಬೆಂಗಳೂರು : ಆದಿಚುಂಚನಗಿರಿ ಬಾಲ ಗಂಗಾಧರನಾಥ ಸ್ವಾಮೀಜಿ ಅವರಿಗೆ ವಿಶ್ವಗುರು ಪ್ರಶಸ್ತಿ ನೀಡಲು ವಿಜಯನಗರದ ಕುವೆಂಪು ಕಲಾ ನಿಕೇತನ ನಿರ್ಧರಿಸಿದೆ.

ಬಾಲಗಂಗಾಧರನಾಥ ಸ್ವಾಮೀಜಿ ಜನ್ಮದಿನವಾದ ಜನವರಿ 18 (2002 ನೇ ಇಸವಿ) ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು. ಸಮಾರಂಭದಲ್ಲಿ ವಿಶ್ವಗುರು ಪ್ರಶಸ್ತಿ , 990 ಗ್ರಾಂ ತೂಕದ ಚಿನ್ನದ ಕಿರೀಟ ಹಾಗೂ ಪ್ರಶಸ್ತಿ ಪತ್ರವನ್ನು ಸ್ವಾಮೀಜಿ ಅವರಿಗೆ ಅರ್ಪಿಸಲಾಗುವುದು.

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹಾಗೂ ವರನಟ ಡಾ।ರಾಜ್‌ಕುಮಾರ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ವಿ.ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಕಲಾ ನಿಕೇತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಕುವೆಂಪು ಕಲಾ ನಿಕೇತನ ಸಂಸ್ಥೆ , ಪ್ರತಿವರ್ಷ 25 ಸಾವಿರ ರು. ನಗದು ಹಾಗೂ ಬೆಳ್ಳಿಯ ಪದಕವುಳ್ಳ ರಾಷ್ಟ್ರಕವಿ ಕುವೆಂಪು ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+