ಸ್ವಾ ್ಯಪ್ ಅರ್ಥಾತ್ ಕಸ, ನಿಮಗಾಗಿ ಅದರಿಂದಿಷ್ಟು ರಸ
ಯಾವುದೋ ಮುಖ್ಯ ಇ-ಮೇಲ್ ನಿರೀಕ್ಷೆಯಲ್ಲಿ ಇನ್‌ಬಾಕ್ಸ್ ತೆರೆದಾಗ ಅದು ಅಕ್ಷರಶಃ ಕಸದ ಬುಟ್ಟಿ. ಅದರಿಂದ ರಸ ಹೀರುವುದೆಂದರೆ ಸಾಕಪ್ಪಾ ಸಾಕು, ಕಲ್ಲು ಗುದ್ದಿ ಎಣ್ಣೆ ತೆಗೆದಂತೆ ! ಸ್ವಾ ್ಯಪ್‌ರಾಶಿಯ ನಡುವೆ ಸ್ವೀಟ್‌ಗಾಗಿ ಹುಡುಕಾಟ. ಕೆಲವೊಮ್ಮೆ ಕಸ ಅಂದುಕೊಂಡದ್ದೂ ಕೂಡ ರಸವಾಗಬಲ್ಲುದು, ಅಕಸ್ಮಾತ್ತಾಗಿ.
ನಮ್ಮ ಪರಿಸ್ಥಿತಿಯೂ ಹಾಗೆ. ನಮ್ಮ ವೆಬ್ ಸೈಟ್ ಇ-ಮೇಲ್ ಬಾಗಿಲು ವಿಜಯನಗರದ ಹೆಬ್ಬಾಗಿಲಿದ್ದಂತೆ. ಎಲ್ಲರಿಗೂ ಸದಾ ತೆರೆದಿರುವ ಕಾರಣ- ಪ್ರತಿದಿನ, ಪ್ರತಿಕ್ಷಣ ಈ ಮೇಲು ಆ ಮೇಲು ಎಲ್ಲಾ ಮೇಲುಗಳೂ ಪುಂಖಾನುಪುಂಖವಾಗಿ ಒಳನುಗ್ಗುತ್ತಿರುತ್ತವೆ. ಬೇಕಾದವರೇ ಎಲ್ಲ ; ಬೇಡವಾದವರಿವರು ಅನ್ನುವ ಹಾಗಿಲ್ಲ. ನಾನೊಂದು ಕವನ ಗೀಚಿದ್ದೇನೆ, ಪ್ರಕಟಿಸಿ ಅನ್ನುವುದರಿಂದ ಹಿಡಿದು ನೀವು ಬರೆದಿರುವುದು ಸರಿಯೇ ಎಂದು ಪ್ರಶ್ನಿಸುವ ಸಂದೇಶಗಳೂ ಅದರಲ್ಲುಂಟು. ಈ ಇ-ಮೇಲ್‌ಗಳ ರಾಶಿಯ ನಡುವೆ ಇಣುಕುವ ಅಸಂಖ್ಯ ಅನಾಮಧೇಯರ ಕರೆಯೋಲೆ, ‘ಕೆರೆಯೋಲೆ’ಗಳನ್ನು ನಿತ್ಯ ಕೆದಕಿ ನೋಡುವ ಕಾಯಕ ನಮ್ಮ - ಸಂಪಾದಕರದ್ದು.
ಗಾಸಿಪ್ಪು ಅರ್ಥಾತ್ ಗಾಳಿಪಟ : ಗಾಸಿಪ್ಪುಗಳನ್ನು ನಾವು ಹಿತಮಿತವಾಗಿ ಉಣಬಡಿಸಿರುವುದು ನಿಜ. ನಮ್ಮ ಓದುಗರು ಅದನ್ನು ಬಯಸಿದ್ದಾರೆ ಕೂಡ; ಊಟಕ್ಕೆ ನಂಚಿಕೊಳ್ಳಲು ಉಪ್ಪಿನಕಾಯಿಯಂತೆ.
ನಮ್ಮಲ್ಲಿ ಸುಧಾರಾಣಿ ಗರ್ಭಿಣಿಯಾದದ್ದು ತಿಳಿದದ್ದು ತಡವಾಗಿ. ಆಕೆ ತಾಯಿಯಾದ ಸುದ್ದಿ ಗೊತ್ತಾದದ್ದು 15 ದಿನಗಳ ನಂತರ. ಆದರೆ ಹಾಲಿವುಡ್ಡಿನಲ್ಲಿ ಹಾಗಲ್ಲ, ಸ್ವಾಮಿ. ನಟ- ನಟಿಯರ, ಅವರ ಕುಟುಂಬದ ಹೈಲಿ ಕಾನ್ಫಿಡೆಂಟ್ ವಿಷಯಗಳೂ ಇ- ಮೇಲ್ ಲೋಕದಲ್ಲಿ ಅವರಿಗೆ ಗೊತ್ತೇ ಆಗದಂತೆ ತೇಲುತ್ತಾ ಮುಳುಗುತ್ತಿರುತ್ತದೆ. ಇಂಥಾ ಒಂದು ಇ- ಮೇಲ್ ಇವತ್ತು ನಮಗೂ ಬಂದಿದೆ. ಸ್ವಾಪೋ ಸ್ವೀಟೋ.. ನಿರ್ಧಾರ ನಿಮಗೇ ಬಿಟ್ಟಿದ್ದು.
ಕ್ಸೆನಾ ಧಾರಾವಾಹಿಯ ನಿರ್ಮಾಪಕ ರಾಬ್ ಟ್ಯಾಪರ್ಟ್ ಹೆಂಡತಿ ಲಾಲೆಸ್ ಮೂರನೇ ಬಾರಿ ತಾಯಾಗಲಿದ್ದಾರೆ. ಒರಿಜನಲ್‌ನಲ್ಲಿ Lawless Pregnent ಅಂತಿದೆ. ಟ್ಯಾಪರ್ಟ್ ತಂದೆಯಾಗಲಿರುವುದು ಎರಡನೇ ಬಾರಿ ಮಾತ್ರ ! ಯಾಕೆಂದರೆ, ಲಾಲೆಸ್ ಹೆತ್ತಿರುವ ಒಂದು ಗಂಡು ಮಗು (2 ವರ್ಷದ ಜ್ಯೂಲಿಯಸ್) ಮಾತ್ರ ಟ್ಯಾಪರ್ಡ್‌ದು. ಈ ಹಿಂದಿನ ಮದುವೆಯಿಂದ, ಹದಿಮೂರು ವರ್ಷದ ಹಿಂದೆ ಲಾಲೆಸ್ ಹೊಟ್ಟೆಯಲ್ಲಿ ಡೈಸಿ ಹುಟ್ಟಿದ್ದಳು.
‘ಎಕ್ಸ್ ಫೈಲ್ಸ್’ನ ಪ್ರೀಮಿಯರ್‌ನಲ್ಲಿ ಮೊನ್ನೆಯಷ್ಟೇ ಕಾಣಿಸಿಕೊಂಡಿದ್ದ ಲಾಲೆಸ್ ಅಲ್ಲಿ ನೆರೆದಿದ್ದ ನಿರ್ಮಾಪಕರ ದಂಡಿನ ಗಮನ ಸೆಳೆದಿದ್ದರು. ನಟನೆಯ ಆಫರ್‌ಗಳೂ ಹರಿದು ಬಂದವು. ಆದರೂ, ತಾವು ಅಮ್ಮನಾಗುತ್ತಿರುವ ವಿಷಯ ಮಾತ್ರ ಸಸ್ಪೆನ್ಸ್; ಲಾಲೆಸ್ ಹೇಳಲೇ ಇಲ್ಲ. ಆಫರ್‌ಗಳಿಗೆ ಚೆಂದದೊಂದು ನಗೆಯೇ ಉತ್ತರ. ಇದೀಗ ಲಾಲೆಸ್ ಪ್ರಚಾರಕ (ಪಬ್ಲಿಸಿಸ್ಟ್) ಲೀ ಕ್ರ್ಯಾಂಟ್‌ಜ್ಲರ್ ಹೇಳುವಂತೆ, ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲಾಲೆಸ್‌ಗೆ ಹೆರಿಗೆಯಾಗಲಿದೆ. ಮಗು ಹೆಣ್ಣೋ ಗಂಡೋ ಅಂತ ವೈದ್ಯರು ಹೇಳಿಲ್ಲ. ಹೀಗಾಗಿ ನಿರ್ಮಾಪಕರು ನಾಯಕಿ ಲಾಲೆಸ್ ಕನಸನ್ನು ಸದ್ಯಕ್ಕೆ ಕಾಣುವ ಹಾಗಿಲ್ಲ !
70ರಲ್ಲಿ ಪಪ್ಪಾ ಆದ ರುಪರ್ಟ್ ಮುರ್ಡೋಕ್ : ಮೀಡಿಯಾ ಬ್ಯಾರೆನ್ ಎಂದೇ ಗುರ್ತಿಸಿಕೊಂಡಿರುವ ಎಪ್ಪತ್ತರ ಹರೆಯದ ರುಪರ್ಟ್ ಮುರ್ಡೋಕ್ ಐದನೇ ಬಾರಿಗೆ ತಂದೆಯಾಗಿದ್ದಾರೆ. ಹುಣಸೆ ಮರಕ್ಕೆ ಮುಪ್ಪಾದರೂ ಹುಳಿಗೆ ಮುಪ್ಪಿಲ್ಲ ಅನ್ನುವುದು ಇದರಿಂದ ರುಜುವಾತಾಗಿದೆ. ನವೆಂಬರ್ 19ರಂದು ಮರ್ಡೋಕ್ ಪತ್ನಿ 33ರ ಹರೆಯದ ವೆಂಡಿ ಡೆಂಗ್ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗು, ಬಾಣಂತಿ ಇಬ್ಬರೂ ಆರೋಗ್ಯ. ಮಗುವಿನ ಹೆಸರು ಹೆಲೆನ್ ಮುರ್ಡೋಕ್.
What do you think about this article ?
ಮುಖಪುಟ / ಲೋಕೋಭಿನ್ನರುಚಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications