ದ್ವಿತೀಯ ತ್ರೆೃಮಾಸಿಕ : ಕೆನರಾ ಬ್ಯಾಂಕಿಗೆ 306 ಕೋಟಿ ರು. ನಿವ್ವಳ ಲಾಭ
ಬೆಂಗಳೂರು : ಸೆಪ್ಟೆಂಬರ್ 30ಕ್ಕೆ ಮುಗಿದ ಪ್ರಸಕ್ತ ವಿತ್ತ ವರ್ಷದ ಎರಡನೇ ತ್ರೆೃಮಾಸಿಕದಲ್ಲಿ ಕೆನರಾ ಬ್ಯಾಂಕ್ 306 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಪ್ರತಿಶತ 145ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕಿನ ಬೆಂಗಳೂರು ವಿಭಾಗದ ಸಿಎಂಡಿ ಆರ್.ವಿ.ಶಾಸ್ತ್ರಿ ಹೇಳಿದ್ದಾರೆ.
ಕಳೆದ ವಿತ್ತ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 125 ಕೋಟಿ ರುಪಾಯಿ ಲಾಭ ಗಳಿಸಿತ್ತು. ಕಳೆದ ವಿತ್ತ ವರ್ಷದಲ್ಲಿ ಗಳಿಸಿದ ಒಟ್ಟಾರೆ ಲಾಭವನ್ನೂ ದ್ವಿತೀಯ ತ್ರೆೃಮಾಸಿಕದ ಲಾಭ ಮೀರಿಸಿದ್ದು, ಬ್ಯಾಂಕಿನ ವಹಿವಾಟು ಸಾಕಷ್ಟು ಏರುಮುಖವಾಗಿದೆ. ಕಳೆದ ವಿತ್ತ ವರ್ಷದಲ್ಲಿ ಬ್ಯಾಂಕಿನ ನಿವ್ವಳ ಲಾಭ 285 ಕೋಟಿ ರುಪಾಯಿ ಆಗಿತ್ತು.
ಬ್ಯಾಂಕಿನ ದ್ವಿತೀಯ ತ್ರೆೃಮಾಸಿಕದ ಮುಖ್ಯಾಂಶಗಳು ಹೀಗಿವೆ....
- ಜಾಗತಿಕ ವಹಿವಾಟು- 90, 136 ಕೋಟಿ ರುಪಾಯಿ
- ಠೇವಣಿ ಮೊತ್ತ- 61,517 ಕೋಟಿ ರು.
- ಅಡ್ವಾನ್ಸ್ಗಳ ಮೊತ್ತ- 28,619 ಕೋಟಿ ರು.
- ಈ ಅವಧಿಗೆ ಮೊದಲು ಬ್ಯಾಂಕಿನ 2407 ಶಾಖೆಗಳ ಪೈಕಿ 996 ಗಣಕೀಕೃತವಾಗಿದ್ದವು. ಇದೀಗ 1085 ಶಾಖೆಗಳು ಗಣಕೀಕೃತ.
- ಇದೀಗ 33 ಎ ಟಿಎಂ ಕೌಂಟರುಗಳಿದ್ದು, ಮುಂದಿನ ವರ್ಷ ಮಾರ್ಚ್ ಹೊತ್ತಿಗೆ 100 ಎಟಿಎಂ ಕೌಂಟರುಗಳನ್ನು ತೆರೆಯಲಾಗುವುದು.
- ದೆಹಲಿ, ಮುಂಬಯಿ, ಚೆನ್ನೈ, ಕೊಲ್ಕತ್ತಾ ಹಾಗೂ ಬೆಂಗಳೂರನ್ನು ಏಕ ಜಾಲ ವ್ಯವಸ್ಥೆಯಡಿಗೆ ತಂದು, ಈ ಜಾಗೆಗಳಲ್ಲಿ ಎಲ್ಲಿಯೇ ಆದರೂ ವಹಿವಾಟು ನಡೆಸುವ ಸೌಕರ್ಯವನ್ನು ಮುಂದಿನ ವರ್ಷ ಜೂನ್ ಹೊತ್ತಿಗೆ ಗ್ರಾಹಕರಿಗೆ ಕಲ್ಪಿಸಲಾಗುವುದು.
- ವೃತ್ತಿಪರರಿಗೆ ಮತ್ತು ಆಸ್ತಿದಾರರಿಗೆ ಅನುವಾಗುವಂಥ CANRENT and CANMORTGAGE ಎಂಬ ಸಾಲ ಸವಲತ್ತನ್ನೂ ಬ್ಯಾಂಕ್ ಜಾರಿಗೆ ತಂದಿದೆ.
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications