ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ರಾಜ್ಯದ ತಾಲೂಕುಗಳ ಸಂಖ್ಯೆ ಆಗಲಿದೆ 175 +

By Staff
|
Google Oneindia Kannada News

ಬೆಂಗಳೂರು: 175 ತಾಲೂಕುಗಳುಳ್ಳ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ಹೊಸ ತಾಲೂಕು ಸೇರ್ಪಡೆ ಆಗಲಿದೆ. ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಡಿ.12ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷ್ಣರಾಜಪುರ ತಾಲೂಕನ್ನು ಉದ್ಘಾಟಿಸಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸ ಪೂರ್ವ ತಾಲೂಕಿನ ಉದ್ಘಾಟನೆಯಾಂದಿಗೆ ರಾಜ್ಯದ ತಾಲೂಕುಗಳ ಸಂಖ್ಯೆ 176ಕ್ಕೆ ಏರಲಿದೆ. ವರ್ತೂರು, ಕೃಷ್ಣರಾಜಪುರ ಸೇರಿದಂತೆ ಒಟ್ಟು ಮೂರು ಹೋಬಳಿಗಳ ವ್ಯಾಪ್ತಿಯ ಈ ಹೊಸ ತಾಲೂಕಿನ ಕೇಂದ್ರ ಕೃಷ್ಣರಾಜಪುರ ಆಗಲಿದೆ. ಇದು ಸಚಿವ ಸಂಪುಟದ ತೀರ್ಮಾನ.

ಈ ವಿಷಯವನ್ನು ವರ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪಶುಸಂಗೋಪನೆ ಮತ್ತು ಸಕ್ಕರೆ ಖಾತೆ ಸಚಿವ ಎ. ಕೃಷ್ಣಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಈ ಹೊಸ ತಾಲೂಕಿನ ಉದ್ಘಾಟನೆಯ ದಿನ ಮುಖ್ಯಮಂತ್ರಿಗಳು ವರ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X