Get Updates
Get notified of breaking news, exclusive insights, and must-see stories!

ಕಾಬೂಲ್‌ಗೆ ತೆರಳಿದ ಭಾರತೀಯ ರಾಜತಾಂತ್ರಿಕರ ನಿಯೋಗ

ನವದೆಹಲಿ : 1996 ರ ನಂತರ ಇದೇ ಮೊದಲ ಬಾರಿಗೆ ಭಾರತದ ರಾಜತಾಂತ್ರಿಕರ ತಂಡವೊಂದು ಆಪ್ಘಾನಿಸ್ತಾನ ಪ್ರವೇಶಿಸಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಪ್ರಕಟಿಸಿದ್ದಾರೆ.

ವಿಶೇಷ ರಾಯಭಾರಿಯನ್ನು ಒಳಗೊಂಡಿರುವ ಈ ನಿಯೋಗ ಬುಧವಾರ ಬೆಳಗ್ಗೆ ಕಾಬೂಲ್‌ ಸಮೀಪದ ಬಗ್ರಂ ವಿಮಾನ ನಿಲ್ದಾಣ ತಲುಪಿದ ವಿಷಯವನ್ನು ಜಸ್ವಂತ್‌ಸಿಂಗ್‌ ರಾಜ್ಯಸಭೆಯ ಗಮನಕ್ಕೆ ತಂದರು. ಮೆಡಿಕಲ್‌ ಹಾಗೂ ನರ್ಸಿಂಗ್‌ ಸಾಮಗ್ರಿಗಳನ್ನು ಹೊಂದಿರುವ ಈ ನಿಯೋಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯಾಂದಿಗೆ ಕಾಬೂಲ್‌ನಲ್ಲಿ ತಂಗುವುದೆಂದು ಜಸ್ವಂತ್‌ ಹೇಳಿದರು.

ಆಪ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ವಹಿಸಿಕೊಂಡ ನಂತರ ಭಾರತದ ರಾಜತಾಂತ್ರಿಕರು ಆಪ್ಘಾನಿಸ್ತಾನಕ್ಕೆ ತೆರಳುತ್ತಿರುವುದು ಇದೇ ಮೊದಲು. ಸೆಪ್ಟಂಬರ್‌ 26, 1996 ರಂದು ಕಾಬೂಲ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿತ್ತು .

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+