ಅಯ್ಯಪ್ಪನ ಭಕ್ತರ ನೆರವಿಗೆ ಶಬರಿಮಲೆಯಲ್ಲಿ ಸ್ಟೇಟ್ ಬ್ಯಾಂಕ್ ಶಾಖೆ
ಶಬರಿಮಲೆ: ಇದು ಶಬರಿಮಲೆ ಅಯ್ಯಪ್ಪನ ಸೀಸನ್. ಸ್ವಾಮಿಯ ದರ್ಶನಕ್ಕೆ ದೇಶದ ವಿವಿಧ ಭಾಗಗಳಿಂದ ತಂಡೋಪತಂಡವಾಗಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ಭಕ್ತರ ಅನುಕೂಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಅಯ್ಯಪ್ಪನ ಸನ್ನಿಧಾನದಲ್ಲಿ ವಿಸ್ತರಣಾ ಶಾಖೆಯಾಂದನ್ನು ತೆರೆದಿದೆ.
ಅಯ್ಯಪ್ಪನ ಭಕ್ತರ ನೆರವಿಗಾಗಿಯೇ ಪಂಪಾ ಸನ್ನಿಧಾನದ ಗಣಪತಿ ದೇವಸ್ಥಾನದ ಬಳಿ ನವೆಂಬರ್ 16ರಿಂದ ಈ ಶಾಖೆ ಆರಂಭಿಸಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಈ ಶಾಖೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಸಹಯೋಗಿ ಬ್ಯಾಂಕ್(ಯಾವುದೇ ಸ್ಟೇಟ್ ಬ್ಯಾಂಕ್ ಶಾಖೆಯಿಂದ) ಗಳಿಂದ ಪಥನಂಥಿಟ್ಟು ಶಾಖೆಯ ಹೆಸರಿಗೆ ಪಡೆದ ಡಿಮಾಂಡ್ ಡ್ರಾಫ್ಟ್ಗಳನ್ನು ನಗದೀಕರಿಸಿಕೊಳ್ಳಬಹುದಾಗಿದೆ.
ಪಿಎಎನ್ (ಆದಾಯ ತೆರಿಗೆ ಇಲಾಖೆ ನೀಡುವ ಕಾರ್ಡ್), ಡ್ರೆೃವಿಂಗ್ ಲೈಸೆನ್ಸ್, ಚುನಾವಣೆ ಗುರುತು ಚೀಟಿ, ಪಾಸ್ಪೋರ್ಟ್ ಅಥವಾ ಡಿಮಾಂಡ್ ಡ್ರಾಫ್ಟ್ ಪಡೆದ ಬ್ಯಾಂಕ್ನಿಂದ ಸಹಿ ದೃಢೀಕರಿಸಲು ಪಡೆದ ಪತ್ರ - ಇದಾವುದಾದರೂ ಒಂದನ್ನು ಗುರುತಿಗಾಗಿ ತೋರಿಸಿ, ಡಿಮಾಂಡ್ ಡ್ರಾಫ್ಟ್ ಹಣ ಪಡೆಯಬಹುದು ಎಂದು ಅದು ತಿಳಿಸಿದೆ.
ಅಲ್ಲದೆ, ಈ ವಿಸ್ತರಣಾ ಶಾಖೆಯಿಂದ ಡಿಮಾಂಡ್ ಡ್ರಾಫ್ಟ್ - ಬ್ಯಾಂಕರ್ಸ್ ಚೆಕ್ ಪಡೆಯುವ ಅವಕಾಶವನ್ನೂ ಗ್ರಾಹಕರಿಗೆ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ [email protected] ಗೆ ಇ ಮೇಲ್ ಮಾಡಬಹುದು. ಬ್ಯಾಂಕ್ನ ವೆಬ್ ಸೈಟ್ ವಿಳಾಸ: ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications