Get Updates
Get notified of breaking news, exclusive insights, and must-see stories!

ಕಾಗಿನೆಲೆ: ಕನಕ ಜಯಂತಿ ಪ್ರಯುಕ್ತ ಡಿ.3 ರಂದು ಸಂಗೀತೋತ್ಸವ

ಬೆಂಗಳೂರು: ಕನಕ ಜಯಂತಿಯ ಪ್ರಯುಕ್ತ ಡಿಸೆಂಬರ್‌ 3ರ ಸೋಮವಾರ ಕಾಗಿನೆಲೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ವಿಷಯವನ್ನು ಸಂತ ಕನಕದಾಸ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಬೀರೇಂದ್ರ ಕೇಶವ ತಾರಕಾನಂದಪುರ ಸ್ವಾಮೀಜಿ ಪ್ರಕಟಿಸಿದ್ದು, ಕನಕ ದಾಸರ ತತ್ವ ಸಂದೇಶಗಳನ್ನು ಸಂಗೀತೋತ್ಸವದ ಮೂಲಕ ಜನರಿಗೆ ತಲುಪಿಸಿ, ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಸಮಿತಿಯ ಉದ್ದೇಶ ಎಂದು ಹೇಳಿದ್ದಾರೆ.

ಕನಕ ಜಯಂತಿಯ ಸಲುವಾಗಿ- ಕನಕದಾಸ ಕಾವ್ಯ ವೈಭವ ಪುಸ್ತಕ ಬಿಡುಗಡೆ, ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಪ್ರೊ. ರಾಮಚಂದ್ರರಾವ್‌, ಗಂಗೂಬಾಯಿ ಹಾನಗಲ್‌ ನೇತೃತ್ವದ ಸಮಿತಿ ಐದು ಕೃತಿಗಳನ್ನು ಸಂಗೀತೋತ್ಸವಕ್ಕಾಗಿ ಆಯ್ಕೆ ಮಾಡಿದೆ. ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನೀ ಸಂಗೀತ ಶೈಲಿಯ ಸಮೂಹ ಗಾಯನ, ಮತ್ತು ದಾಸರ ಜೀವನ ಶೈಲಿಯ ಕುರಿತು ಸಂಕಿರಣಗಳನ್ನು ಏರ್ಪಡಿಸಲಾಗಿದೆ.

ದಾಸ ಸಾಹಿತ್ಯ ಪ್ರಚಾರಕ್ಕಾಗಿ ರಾಜ್ಯದ ಎಲ್ಲ 27 ಜಿಲ್ಲೆಗಳಲ್ಲಿ , ಪ್ರತಿ ಜಿಲ್ಲೆಗೆ ಎಂಟು ದಾಸವಾಹಿನಿ ತಂಡಗಳನ್ನು ರಚಿಸಲಾಗಿದ್ದು, ಏಳು ದಿನಗಳ ಅವಧಿಯಲ್ಲಿ ಈ ತಂಡಗಳು 112 ಕಾರ್ಯಕ್ರಮಗಳನ್ನು ನೀಡಲಿವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+