Get Updates
Get notified of breaking news, exclusive insights, and must-see stories!

ಜನವರಿ 16ರಂದು ಅಂತರಿಕ್ಷಕ್ಕೆ ಹಾರಲಿದೆ ಇನ್ಸಾಟ್‌ 3 ಸಿ

ಬೆಂಗಳೂರು : ಭಾರತದ ಸಂಪರ್ಕ ಸಂವಹನ ಉಪಗ್ರಹ ಇನ್ಸಾಟ್‌ -3ಸಿಯನ್ನು ಜನವರಿ 16ರಂದು ಅಂತರಿಕ್ಷಕ್ಕೆ ಹಾರಿಸಲು ನಿರ್ಧರಿಸಲಾಗಿದೆ. ಈ ವಿಷಯವನ್ನು ಭಾರತ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮೂಲಗಳು ತಿಳಿಸಿವೆ.

ಈ ಉಪಗ್ರಹವನ್ನು ಫಿಪ್ತ್‌ ಜನರೇಷನ್‌ ಎರೈನ್‌-5ರ ಮೂಲಕ ಉಡಾಯಿಸಲು ನಿರ್ಧರಿಸಲಾಗಿತ್ತಾದರೂ, ಅನಗತ್ಯ ವಿಳಂಬ ತಪ್ಪಿಸುವ ದೃಷ್ಟಿಯಿಂದ ಫೋರ್ತ್‌ ಜನರೇಷನ್‌ ರಾಕೆಟ್‌ ಮೂಲಕ ಉಡಾಯಿಸಲು ನಿರ್ಧರಿಸಲಾಗಿದೆ. ಉಡಾವಣೆಗೆ ಜನವರಿ 16ನೇ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ಈ ಮುನ್ನ ಇನ್ಸಾಟ್‌ 3 ಸಿಯನ್ನು ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಫ್ರಂಚ್‌ ಗಯಾನಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಹಾರಿಸಲು ನಿರ್ಧರಿಸಲಾಗಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಅದನ್ನು ರದ್ದುಪಡಿಸಲಾಯಿತು. ಆನಂತರ ನವೆಂಬರ್‌ನಲ್ಲಿ ಉಪಗ್ರಹ ಉಡಾವಣೆಗೆ ದಿನಾಂಕ ನಿಗದಿಪಡಿಸಲಾಯಿತಾದರೂ, ತಾಂತ್ರಿಕ ತೊಂದರೆಯನ್ನು ಪತ್ತೆಹಚ್ಚಿ ಸರಿಪಡಿಸಲು ಕಾಲಾವಕಾಶ ಸಾಕಾಗದೇ ಹೋದ್ದರಿಂದ ಉಡಾವಣೆಯನ್ನು 2002ರ ಜನವರಿಗೆ ನಿಗದಿಪಡಿಸಲಾಗಿದೆ.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+