ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ರಾಜ್ಯ ಕ್ರಿಕೆಟ್ ಟೂರ್ನಿ
ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಡಿಸೆಂಬರ್ 10 ರಿಂದ 25 ರವರೆಗೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ.
ರಾಹುಲ್ ಕಟ್ಟಿ ಸ್ಪೋಟ್ಸ್ ರ್ ಮತ್ತು ಸೋಷಿಯಲ್ ಕ್ಲಬ್ನ ಸಹಯೋಗದಲ್ಲಿ ಟೂರ್ನಮೆಂಟನ್ನು ಆಯೋಜಿಸಲಾಗಿದೆ. ಟೂರ್ನಿಯಲ್ಲಿ ಗೆಲ್ಲುವ ತಂಡಕ್ಕೆ 25,001 ರೂಪಾಯಿ ನಗದು, ಸರ್ಟಿಫಿಕೇಟ್ ಮತ್ತು ಟ್ರೋಫಿ ನೀಡಲಾಗುವುದು. ಎರಡನೇ ಬಹುಮಾನಕ್ಕೆ 10 ಸಾವಿರ ರೂಪಾಯಿ ನಗದು ಬಹುಮಾನವಿದೆ. ಪ್ರತಿ ಮ್ಯಾಚ್ನಲ್ಲಿಯೂ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಇದ್ದು, ಅಂತಿಮ ಸುತ್ತು ಪ್ರವೇಶಿಸುವ ತಂಡಕ್ಕೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.
ಟೂರ್ನಿಯಲ್ಲಿ ಭಾಗವಹಿಸಲು ಇಚ್ಚಿಸುವ ರಾಜ್ಯದ ಕ್ರಿಕೆಟ್ ತಂಡಗಳು ಮತ್ತು ಹೆಚ್ಚಿನ ವಿವರ ಪಡೆಯ ಬಯಸುವವರು ಟೂರ್ನಮೆಂಟ್ ಸಂಯೋಜಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.(ಕೋಡ್: 08333)- 57026, 57362 , 57152.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, November 20, 2001, 5:30 [IST]