Get Updates
Get notified of breaking news, exclusive insights, and must-see stories!

‘ಹೆಡ್‌ ಇದ್ರೇ ಹೇರ್‌ಸ್ಟೈಲ್‌- ಹೆಲ್ಮೆಟ್‌ ಕಡ್ಡಾಯ’: ಸಾಂಗ್ಲಿಯಾನ!

ಬೆಂಗಳೂರು: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿಯೇ ವಾಹನ ಚಾಲನೆ ಮಾಡಬೇಕು ಎಂಬ ಇಂಗಿತವನ್ನು ನಗರ ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನಾ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಆರಂಭವಾದ ಅಪಘಾತ ಪರಿಸ್ಥಿತಿಯ ಸಮಗ್ರ ನಿರ್ವಹಣೆ ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಹೆಲ್ಮೆಟ್‌ ಕಡ್ಡಾಯಗೊಳಿಸುವ ಸಂಬಂಧ ತಾವು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಮಂಗಳವಾರ (ನ.20) ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸುವುದಾಗಿ ಅವರು ತಿಳಿಸಿದರು. ದೆಹಲಿಯಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯ ಸವಾರರಿಬ್ಬರೂ ಹೆಲ್ಮೆಟ್‌ ಧರಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಈ ಪದ್ಧತಿ ಬೆಂಗಳೂರಿಗೇಕೆ ಅನ್ವಯವಾಗಬಾರದು ಎಂದರು.

ಪ್ರಾಣದ ಜೊತೆ ಹುಡುಗಾಟ ಆಡುವುದು ತರವಲ್ಲ. ಹೇರ್‌ಸ್ಟೈಲ್‌ಗಿಂತ ಹೆಡ್‌ ಮುಖ್ಯ ಎಂಬುದನ್ನು ವಾಹನ ಸವಾರರು ಅರಿಯಬೇಕು. ತಲೆ ಇದ್ದರೇ ತಲೆಕೂದಲ ಅಂದ-ಚೆಂದ ಎಲ್ಲಾ ಎಂಬುದನ್ನು ಮನಗಂಡು, ಪ್ರತಿಯಾಬ್ಬರೂ ನಿಯಮಕ್ಕೆ ಬೆಂಬಲ ನೀಡಬೇಕು ಎಂದು ಸಾಂಗ್ಲಿಯಾನಾ ಹೇಳಿದರು.

ಈಗಾಗಲೇ ಡಾ. ಸುದರ್ಶನ್‌ ಸಮಿತಿ ಕೂಡ ಹೆಲ್ಮೆಟ್‌ ಕಡ್ಡಾಯ ಮಾಡುವಂತೆ ಶಿಫಾರಸು ಮಾಡಿದೆ ಎಂದ ಅವರು, ಹೆಲ್ಮೆಟ್‌ ಮಹತ್ವವನ್ನು ವಿವರಿಸಿದಾಗ, ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೈದ್ಯರು ಸಾಂಗ್ಲಿಯಾನಾ ಅವರ ವಿಚಾರಧಾರೆಗೆ ತಲೆದೂಗಿದರು.

ಮುಖಪುಟ / ಸಾಂಗ್ಲಿಯಾನ ವಾಚ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+