Get Updates
Get notified of breaking news, exclusive insights, and must-see stories!

ಜನತೆಯತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ

ಬೀದರ್‌ : ಯುವಜನರಿಗೆ ಕನ್ನಡ ಪರಂಪರೆ-ಸಂಸ್ಕೃತಿಯ ಪರಿಚಯ ಮಾಡಿಕೊಡಲು ಈವರೆಗೆ 104 ಕನ್ನಡ ಶಿಬಿರಗಳನ್ನು ನಡೆಸಿದ್ದೇವೆ. ಕನ್ನಡದ ಬಗೆಗೆ ಇನ್ನೂ ಹೆಚ್ಚು ಒತ್ತು ಕೊಡಲು ಜನತೆಯತ್ತ ಕನ್ನಡ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ। ಮಾ.ಗು.ಬಿರಾದರ್‌ ತಿಳಿಸಿದ್ದಾರೆ.

ವಾರ್ತಾ ಇಲಾಖೆ ಇತ್ತೀಚೆಗೆ ಆಯೋಜಿಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ಅಲ್ಪ ಸಂಖ್ಯಾಕರಿಗೆ ಕನ್ನಡ ಭಾಷೆ ಕಲಿಕೆಗೆ ನೆರವಾಗಲು ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಬೀದರ್‌ನಲ್ಲಿ ಇಂಥಾ 14 ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲಿ 50 ವಿದ್ಯಾರ್ಥಿಗಳಿದ್ದಾರೆ ಎಂದರು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗದಲ್ಲಿ ಪ್ರತಿಶತ 5ರಷ್ಟು ಮೀಸಲಾತಿ ನೀಡಬೇಕೆಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸನ್ನು ಸರ್ಕಾರ ಅನುಮೋದಿಸಿದೆ. ಮೀಸಲಾತಿ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯ ಬಗೆಗೂ ಪ್ರಾಧಿಕಾರ ಚಿಂತಿಸುತ್ತಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತಿತರ ವೃತ್ತಿಪರ ಶಿಕ್ಷಣದಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಬಗ್ಗೆ ನವೆಂಬರ್‌ 24ರ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಬಿರಾದರ್‌ ಹೇಳಿದರು.

ಕನ್ನಡ ವಿಭಾಗ ಉದ್ಘಾಟನೆ : ಭುವನೇಶ್ವರಿ ದೇವಿಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನಕ್ಕಾಗಿ ವಿಶೇಷ ವಿಭಾಗವನ್ನು ಬಿರಾದರ್‌ ಸಾಂಕೇತಿಕವಾಗಿ ಉದ್ಘಾಟಿಸಿದರು. ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ತರಲು ಈ ವಿಭಾಗ ಕೆಲಸ ಮಾಡಲಿದೆ.

ರಂಗ ಮತ್ತು ಭಾಷೆ : ಮೈಸೂರಿನ ಭಾರತೀಯ ಭಾಷಾ ಪ್ರತಿಷ್ಠಾನ ಮತ್ತು ಕರ್ನಾಟಕ ನಾಟಕ ಅಕಾಡೆಮಿ ‘ರಂಗ ಮತ್ತು ಭಾಷೆ’ ಎಂಬ ವಿಷಯ ಕುರಿತ 10 ದಿನಗಳ ಜಂಟಿ ಕಮ್ಮಟವನ್ನು ಆಯೋಜಿಸಿವೆ. ಡಿಸೆಂಬರ್‌ನಲ್ಲಿ ಈ ಕಮ್ಮಟ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಕರ್ನಾಟಕ ನಾಟಕ ಅಕಾಡೆಮಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು- 560 002... ಇಲ್ಲಿ ನವೆಂಬರ್‌ 25ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಕಮ್ಮಟಕ್ಕೆ ಆಯ್ಕೆಯಾಗುವವರಿಗೆ ಪ್ರವಾಸ ಮತ್ತು ತಂಗು ಭತ್ಯೆ ನೀಡಲಾಗುತ್ತದೆ ಎಂದು ಅಕಾಡೆಮಿಯ ನೋಂದಣಾಧಿಕಾರಿ ಟಿ.ಎಸ್‌.ದಕ್ಷಿಣಾಮೂರ್ತಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+