ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ವರ್ಷದ ಹಿಂದೆ ಕಾಣೆಯಾಗಿದ್ದ ಸ್ವಾಮೀಜಿ ಮತ್ತೆ ಉಡುಪಿಗೆ

By Staff
|
Google Oneindia Kannada News

ಉಡುಪಿ : ಪೇಜಾವರ ಮಠದಿಂದ ಹದಿನೈದು ವರ್ಷಗಳ ಹಿಂದೆ ಪೀಠ ತ್ಯಾಗ ಮಾಡಿ ಹೊರಟು ಹೋಗಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥ ಸ್ವಾಮೀಜಿ ಮತ್ತೆ ಉಡುಪಿಗೆ ಮರಳಿದ್ದಾರೆ.

ವಿಶ್ವವಿಜಯ ತೀರ್ಥ ಸ್ವಾಮೀಜಿಗಳ ಪೀಠ ತ್ಯಾಗ ಉಡುಪಿ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿತ್ತು. ಈಗಿರುವ ಪರ್ಯಾಯ ಪೀಠ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ 1969ರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ವಿಜಯ ತೀರ್ಥ ಸ್ವಾಮೀಜಿ ಕುಂಭಾಶಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆರ್ಥಿಕ ಬಲ ಒಗ್ಗೂಡಿಸಲು ಮತ್ತು ಮಾಧ್ವ ತತ್ವ ಪ್ರಚಾರಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದರು.

ಸ್ವಾಮೀಜಿಗಳು ಸಮುದ್ರ ದಾಟಿ ಹೋಗುವುದು ಸಂಪ್ರದಾಯಕ್ಕೆ ವಿರೋಧ ಎಂದು ಫಲಿಮಾರು ಮಠದ ವಿದ್ಯಾಮಾನ್ಯ ತೀರ್ಥರು ಆಕ್ಷೇಪಿಸಿದ್ದರು. ಅಮೆರಿಕಾದಿಂದ ವಾಪಾಸಾಗುತ್ತಲೇ ಬೆದರಿಕೆ ಪತ್ರಗಳು, ಕೃಷ್ಣನ ಪೂಜೆಯ ಅವಕಾಶ ನೀಡುವುದಿಲ್ಲ ಎಂಬ ದಬಾಯಿಸುವಿಕೆಗಳು ಮುಂಬಯಿಯಲ್ಲೇ ಸ್ವಾಮೀಜಿಯನ್ನು ಎದುರುಗೊಂಡವು. ಆದರೆ ಪೇಜಾವರ ಸ್ವಾಮೀಜಿಗಳು ವಿಶ್ವ ವಿಜಯ ಸ್ವಾಮಿಗಳನ್ನು ಸ್ವಾಗತಿಸಲು ಕಾರ್ಯಕ್ರಮಗಳನ್ನುಆಯೋಜಿಸಿದ್ದರು.

ಈ ಎಲ್ಲ ಗೊಂದಲದಿಂದ ರೋಸಿ ಹೋದ ಸ್ವಾಮೀಜಿ ಉಡುಪಿ ಮಠಕ್ಕೆ ಆಗಮಿಸದೇ ಸನ್ಯಾಸವನ್ನೇ ತ್ಯಾಗ ಮಾಡಿ ಪೂರ್ವಾಶ್ರಮಕ್ಕೆ ಹಿಂತಿರುಗಿ ಗುರುರಾಜ ಆಚಾರ್ಯರಾಗಿ ಚಿಕಾಗೋಗೆ ಹೋಗಿದ್ದರು.

ಧಾರ್ಮಿಕ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವ ವಿಜಯರು ಶ್ರೀಮಾನ್ಯ ಸುಧಾಸಾರವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಮಾಧ್ವ ತತ್ವಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಸ್ವಾಮೀಜಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದು, ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರೊಂದಿಗೆ ಉಡುಪಿಗೆ ಆಗಮಿಸಿದ್ದಾರೆ. ಪೇಜಾವರ ಮಠದ ಅಧೀನದಲ್ಲಿರುವ ಯಾವುದಾದರೂ ಸಂಸ್ಥೆಯಾಂದರ ನೇತೃತ್ವ ವಹಿಸುವ ಇಚ್ಛೆ ಅವರಿಗಿದೆ ಎಂದು ತಿಳಿದು ಬಂದಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X