Get Updates
Get notified of breaking news, exclusive insights, and must-see stories!

ಯಾತ್ರಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗೊಂಡಿದೆ ಶಬರಿಮಲೆ

ತಿರುವನಂತಪುರ: ಇದು ಕಾರ್ತೀಕ. ಕಾರ್ತೀಕ ಮಾಸ ಬಂದರೆ, ಶಬರಿಗಿರಿಯಲ್ಲಿ ಸಂಭ್ರಮ- ಸಡಗರ. ಅಯ್ಯಪ್ಪನ ಕಾಣಲು ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುವುದೇ ಈ ಮಾಸದಿಂದಲೇ. ಈಗಾಗಲೇ ಮಾಲೆತೊಟ್ಟಿರುವ - ತೊಡುತ್ತಿರುವ ಸಾವಿರಾರು ಭಕ್ತರು ಶಬರಿಮಲೆಗೆ ತೆರಳಲು ಸಜ್ಜಾಗಿದ್ದಾರೆ.

ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ/ಪುಣ್ಯ ಕ್ಷೇತ್ರಗಳೂ ಸಜ್ಜಾಗಿವೆ. ಈ ವಿಷಯವನ್ನು ಕೇರಳ ರಾಜ್ಯ ಸಾಂಸ್ಕೃತಿಕ ಮತ್ತು ಮುಜರಾಯಿ ಖಾತೆ ಸಚಿವ ಜಿ. ಕಾರ್ತಿಕೇಯನ್‌ ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ.

ಶಬರಿಗಿರಿಯ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಪ್ರತಿವರ್ಷ ಶೇ.25ರಷ್ಟು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಯಾತ್ರಾರ್ಥಿಗಳಿಗೆ ತಾತ್ಕಾಲಿಕ ವಸತಿಕೇಂದ್ರ ನಿರ್ಮಿಸಿಕೊಳ್ಳಲು ಕೇಂದ್ರವು ದೇವಾಲಯಕ್ಕೆ 22.76 ಹೆಕ್ಟೇರ್‌ ಅರಣ್ಯಭೂಮಿ ನೀಡಿದೆ.

ಈ ಸೀಸನ್‌ನಲ್ಲಿ ಪಂಪಾನದಿ ನೀರು ಮಲಿನವಾಗದಂತೆ ನೋಡಿಕೊಳ್ಳಲು ನಿರ್ಮಿಸುತ್ತಿರುವ ಕೊಳಚೆ ನಿಯಂತ್ರಣ ಘಟಕದ ಮೊದಲ ಹಂತ ನ.15ರ ಗುರುವಾರದ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದೂ ಸಚಿವರು ತಿಳಿಸಿದ್ದಾರೆ. ಕಳೆದ ವರ್ಷ ಜನರ ನೂಕುನುಗ್ಗಲಿನಿಂದ ಕುಸಿದಿದ್ದ ಮರ್ರಕೂಟಂ ಬಳಿ ಶಾಶ್ವತ ತಡೆಗಟ್ಟೆಗಳನ್ನೂ ನಿರ್ಮಿಸಲಾಗುತ್ತಿದೆ.

ಜನರ ಅನುಕೂಲಕ್ಕಾಗಿ ತಾತ್ಕಾಲಿಕ ಮೇಲು ಸೇತುವೆಗಳನ್ನು ಸಹ ನಿರ್ಮಿಸಲಾಗುವುದು. ಪಂಪಾನದಿಯಿಂದ ಗುಡ್ಡದ ತುದಿಯವರೆಗಿನ ಮಾರ್ಗದಲ್ಲಿ ಹೆಚ್ಚುವರಿ ವೈದ್ಯರ ಜೊತೆ ಆರೋಗ್ಯ ಕೇಂದ್ರಗಳನ್ನ ಸ್ಥಾಪಿಸಲಾಗುವುದು. ಮಾರ್ಗದಲ್ಲಿ ಇನ್ನೊಂದು ಹೃದ್ರೋಗ ಕೇಂದ್ರವನ್ನು ಸಹ ತೆರೆಯಲಾಗುವುದು ಎಂದು ಅವರು ಹೇಳಿದರು.

(ಪಿ.ಟಿ.ಐ/ಇನ್‌ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+