ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮ ಬಿನ್‌ ಲ್ಯಾಡೆನ್‌ ಈಗ ಏನು ಮಾಡಬಹುದು?

By Staff
|
Google Oneindia Kannada News

ವಾಷಿಂಗ್ಟನ್‌ : ಒಸಾಮನಿಗಿರುವುದು ಒಂದೇ ದಾರಿ. ತನ್ನ ಅಡಗುತಾಣದಿಂದ ದೇಶದ ಯಾವುದೇ ಬಯಲಿಗೆ ಹೆಲಿಕಾಪ್ಟರ್‌ ಮೂಲಕ ಹಾರುವುದು. ಹ್ಞಾಂ, ಆ ಬಯಲು ವಿಮಾನ ನಿಲ್ಲಲು, ಹಾರಲು ಯೋಗ್ಯವಾಗಿರಬೇಕು. ಅಲ್ಲಿಂದ ಅವನು ತನಗೆ ಬೇಕಾದ ದೇಶಕ್ಕೆ ಹಾರಿ ಹೋಗುವುದು.

ಅಮೆರಿಕೆಯ ಸೆಕ್ರೆಟರಿ ಆಫ್‌ ಸ್ಟೇಟ್‌ ಡೊನಾಲ್ಡ್‌ ರಮ್ಸ್‌ಫೀಲ್ಡ್‌ ದಿ ನ್ಯೂಯಾರ್ಕ್‌ ಟೈಮ್ಸ್‌ಗೆ ಈ ವಿಷಯ ತಿಳಿಸಿದ್ದಾರೆ. ಆಫ್ಘನ್‌ ಆಯಕಟ್ಟಿನ ಎಲ್ಲಾ ಜಾಗೆಗಳಲ್ಲೂ ಅಮೆರಿಕಾ ಯೋಧರ ಬಿಗಿ ಪಹರೆ ಇದೆ. ಅಲ್‌-ಕ್ವೆ ೖದಾ ಹಾಗೂ ತಾಲಿಬಾನ್‌ ಹಿಡಿತವನ್ನು ಕಿತ್ತೆಸೆಯುವ ಸಕಲ ಯತ್ನಗಳೂ ಸಾಗಿವೆ. ದಕ್ಷಿಣ ಆಫ್ಘನ್ನಿನಲ್ಲೇ 100 ಯೋಧರು ನಿಗಾ ಇಟ್ಟು ನಿಂತಿದ್ದಾರೆ. ಅಲ್ಲಿ ತಾಲಿಬಾನ್‌ ನೆಲೆಗಳು ಸಾಕಷ್ಟಿವೆ ಎಂದಿದ್ದಾರೆ.

ಅಮೆರಿಕಾ ಯೋಧರು ಕಟ್ಟುನಿಟ್ಟಾಗಿರುವಂತೆ ಸೂಚಿಸಲಾಗಿದೆ. ತಾಲಿಬಾನ್‌ ಹಾಗೂ ಒಸಾಮ ಮಾತ್ರ ತಮ್ಮ ಗುರಿ. ಸ್ವೇಚ್ಛೆ ಸಲ್ಲ. ಏನು ಮಾಡಬೇಕು, ಯಾಕೆ ಮಾಡಬೇಕು, ಎಲ್ಲಿಗೆ ಬಾಂಬ್‌ ಎಸೆಯಬೇಕು ಎಂಬುದೆಲ್ಲಾ ಸಾಕಷ್ಟು ಪರಿಶೀಲನೆಯ ನಂತರವೇ ನಡೆಯುತ್ತಿರುವುದು. ಇಷ್ಟೆಲ್ಲದರ ನಡುವೆಯೂ ಒಸಾಮ ಸುಮ್ಮಗಾಗುವನಲ್ಲ. ಹಾರಲು ಹುನ್ನಾರ ಹೊಸೆದೇ ತೀರುವ. ಆಫ್ಘನ್ನಿನಿಂದ ಅವನು ಹಾರುವುದಂತೂ ಖಂಡಿತ. ಕನಿಷ್ಠ ಆ ಪ್ರಯತ್ನವನ್ನಾದರೂ ಮಾಡುತ್ತಾನೆ. ಅದಕ್ಕೇ ಪಾಕ್‌- ಆಫ್ಘನ್‌ ಗಡಿಯಲ್ಲಿ ತೀವ್ರ ನಿಗಾ ಇಟ್ಟಿದ್ದೇವೆ. ಹಾರುವ ವಿಮಾನ, ಹೆಲಿಕಾಪ್ಟರ್‌ಗಳನ್ನು ಮೈಯೆಲ್ಲಾ ಕಣ್ಣಾಗಿ ಯೋಧರು ನೋಡುತ್ತಿದ್ದಾರೆ ಎಂದು ರಮ್ಸ್‌ಫೀಲ್ಡ್‌ ಹೇಳಿದ್ದಾರೆ.

(ಎಎಫ್‌ಪಿ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X