ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ: 72 ಕೋಟಿ ರು.ಹಶೀಶ್‌ ವಶ, ಐವರು ಭಾರತೀಯರ ಸೆರೆ

By Staff
|
Google Oneindia Kannada News

ದುಬೈ: ವಿಶ್ವದ ಅತಿದೊಡ್ಡ ಮಾದಕ ವಸ್ತು ಜಾಲವನ್ನು ಭೇದಿಸಿರುವ ದುಬೈ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಭಾರತೀಯರು ಹಾಗೂ 5 ಮಂದಿ ಆಪ್ಘನ್ನರನ್ನು ಬಂಧಿಸಿದ್ದಾರೆ. ಬಂಧಿತರಿಂದ 72 ಕೋಟಿ ರು. ಮೌಲ್ಯದ 13.7 ಟನ್‌ ಹಶೀಶ್‌ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ನಾಲ್ವರು ಭಾರತೀಯರು ಷಿಪ್ಪಿಂಗ್‌ ಕಂಪನಿಗಳನ್ನು ಹೊಂದಿದ್ದು , ತಮ್ಮ ಹಡಗುಗಳ ಮೂಲಕ ಮಾದಕ ವಸ್ತುಗಳನ್ನು ದುಬೈಗೆ ಸಾಗಿಸುತ್ತಿದ್ದರು. ಈ ಮಾದಕ ವಸ್ತುಗಳನ್ನು ಆಪ್ಘಾನಿಸ್ತಾನ ಹಾಗೂ ಇನ್ನಿತರೆ ದೇಶಗಳಲ್ಲಿ ಉತ್ಪಾದಿಸಲಾಗುತ್ತಿತ್ತು ಎಂದು ಪೊಲೀಸ್‌ ಮೂಲಗಳನ್ನುಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕೆನಡಾ, ಆಸ್ಟ್ರೇಲಿಯಾ, ಹಾಲೆಂಡ್‌, ಯೆಮನ್‌, ಷಾರ್ಜಾಗಳಲ್ಲೂ ಈ ಮಾದಕ ವಸ್ತು ಜಾಲ ವಿಸ್ತರಿಸಿದೆ. ಆದರೆ, ಈ ಜಾಲದ ಕೇಂದ್ರ ವ್ಯಕ್ತಿ ನಿಗೂಢನಾಗಿದ್ದು, ಆತನ ಹೆಜ್ಜೆ ಜಾಡನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಯ್ಯದ್‌ ಷರಾಫ್‌ ತಿಳಿಸಿದ್ದಾರೆ.

ಅರಬ್‌ ದೇಶಗಳಲ್ಲಿ ಮಾದಕ ವಸ್ತು ಕಳ್ಳ ಸಾಗಣೆ ಗುರುತರ ಅಪರಾಧವಾಗಿದ್ದು , ಈ ಅಪರಾಧಕ್ಕೆ ಮರಣದಂಡನೆಯನ್ನು ವಿಧಸಲಾಗುತ್ತದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X