ಶಿವಸೇನೆಯಿಂದ ಕಠ್ಮಂಡುವಿನಲ್ಲಿ ವಿಶ್ವದ ಅತಿ ಎತ್ತರದ ತ್ರಿಶೂಲ
ಕಠ್ಮಂಡು : ಐದು ಟನ್ ಭಾರವುಳ್ಳ ವಿಶ್ವದ ಅತೀ ಎತ್ತರದ ತಾಮ್ರದ ತ್ರಿಶೂಲವನ್ನು ಇಲ್ಲಿನ ಭಕ್ತಪುರ ಜಿಲ್ಲೆಯ ಮುಲಕೋಟ್ಗಾಧಿಯಲ್ಲಿ ಅಳವಡಿಸಲಾಗಿದೆ.
ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿ ಈ ತ್ರಿಶೂಲವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದು 32 ಅಡಿಗಳಷ್ಟು ಎತ್ತರವಿದೆ. ನೇಪಾಳದ ಶಿವಸೇನಾ ಸೈನಿಕರಿಂದ ತಯಾರಿಸಲ್ಪಟ್ಟ ಈ ತ್ರಿಶೂಲವನ್ನು ಕಠ್ಮಂಡು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮಂಗಳವಾರ ಹೊತ್ತೊಯ್ಯಲಾಯಿತು. ಬಲಜು ಕೈಗಾರಿಕಾ ಪ್ರದೇಶದಿಂದ ಹೊರಟ ಮೆರವಣಿಗೆ 25 ಕಿಲೋಮೀಟರ್ ದೂರ ಸಾಗಿ ಹಿಮಾಲಯನ್ ರಾಜ್ಯಾಡಳಿತದ ರಾಜಧಾನಿ ಮುಲಕೋಟ್ಗಾಧಿ ತಲುಪಿತು.
ಭಯೋತ್ಪಾದನೆಯ ವಿರುದ್ಧ ಹಾಗೂ, ಶಾಂತಿ ಸಾಮರಸ್ಯವನ್ನು ಹರಡುವ ಉದ್ದೇಶದಿಂದ ಕಠ್ಮಂಡುವಿನ ಮುಖ್ಯ ಬೀದಿಗಳಲ್ಲಿ ತ್ರಿಶೂಲದ ಮೆರವಣಿಗೆ ಸಾಗಿತು ಎಂದು ನೇಪಾಳದ ಶಿವ ಸೇನೆ ಅಧ್ಯಕ್ಷ ಅರುಣ್ ಸುಬೇದಿ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications