ಉಡುಗೊರೆಗೆ ಹೊಸ ಭಾಷ್ಯ
ಸಾಗರದಾಚೆಯಲ್ಲಿ ಕುಂತಿರುವ ನೀವು ಕಾಫಿ ಹೀರುವಾಗ ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿರುವ ಇಳಿ ವಯಸ್ಸಿನ ಅಪ್ಪ ಕರೆಂಟ್ ಬಿಲ್ ಕಟ್ಟಲೋ, ನೀರಿನ ಶುಲ್ಕ ಕಟ್ಟಲೋ ಮೈಲುದ್ದದ ಕ್ಯೂನಲ್ಲಿ ನಿಂತಿರುವುದು ನೆನಪಾಗಬಹುದು. ಆಗ ಕಾಫಿ ರುಚಿಸದು. ಹಸನು ಭವಿತವ್ಯದ ಕನಸು ಕಟ್ಟಿಕೊಂಡು ದೂರದೂರಿಗೆ ಹಾರಿಬಂದಿರುವ ನಿಮ್ಮನ್ನು ಹೆತ್ತವರ ಕಷ್ಟಕ್ಕೆ ಆಗಲಾರದಂತಹ ಅಸಹಾಯಕತೆ ಕಾಡಬಹುದು. ಇಂಥಾ ಚಿಂತೆಯ ನಮ್ಮ ಕೈಗಿಟ್ಟು, ಇನ್ನು ನಿಶ್ಚಿಂತರಾಗಿ.
ಸೂಪರ್‌ಸೇವಾ ಜೊತೆ ಇಂಡಿಯಾಇನ್ಫೋ ಕೈಜೋಡಿಸಿದೆ; ಬೆಂಗಳೂರಿನಲ್ಲಿರುವ ನಿಮ್ಮವರ ಕಷ್ಟ ಕಳೆಯಲು. ವರ್ಷಕ್ಕೆ 99 ಡಾಲರ್ ಕೊಟ್ಟರಾಯಿತು. ಬಿಲ್ಲುಗಳ ಕಟ್ಟುವುದು, ಬ್ಯಾಂಕಿನ ವ್ಯವಹಾರ, ತೆರಿಗೆ ತಲೆನೋವು, ಪೋಸ್ಟಾಫೀಸಿನ ಉಸಾಬರಿ, ಸಾಮಾನು ಖರೀದಿ, ಕೆಟ್ಟ ವಸ್ತುಗಳ ರಿಪೇರಿ, ದೂರದೂರಿಗೆ ಟಿಕೇಟು ಕಾದಿರಿಸುವಿಕೆ ಎಲ್ಲವನ್ನೂ ಸೂಪರ್ ಸೇವಾ ಸಿಬ್ಬಂದಿ ಮಾಡಿಕೊಡುತ್ತಾರೆ. ಒಂದು ಇ-ಮೇಲ್ ಸಂದೇಶ ಅಥವಾ ಫೋನ್ ಕರೆಯಿಂದ ಕುಂತಲ್ಲೇ ಈ ಕೆಲಸವೆಲ್ಲಾ ಸರಬರನೆ ಆಗಿಹೋಗುತ್ತದೆ. ಅಷ್ಟೇ ಅಲ್ಲ ಸಿನಿಮಾ, ಸಂಗೀತ, ಸರ್ಕಸ್ಸು ನೋಡಲು ಟಿಕೆಟ್ ಕೂಡ ನಿಮ್ಮ ಮನೆ ಬಾಗಿಲಿಗೆ !
ಸೂಪರ್ ಸೇವೆಯ ರೂಪುರೇಷೆ ಓದಿಬಿಡಿ....
- ಸೇವೆ ಬೆಂಗಳೂರಿನ ವ್ಯಾಪ್ತಿಯಲ್ಲಿ ಮಾತ್ರ ಲಭ್ಯ
- ಬೆಳಗ್ಗೆ 8 ರಿಂದ ರಾತ್ರಿ 8ಗಂಟೆವರೆಗೆ (ಭಾರತೀಯ ಕಾಲಮಾನದ ಪ್ರಕಾರ) ಮಾತ್ರ ಇಂಥಾ ಕೆಲಸವಾಗಬೇಕು ಎಂದು ಅಪ್ಪಣೆ ಕೊಡಿಸಬಹುದು
- ಸೇವೆ ಬಯಸುವ ಸದಸ್ಯ ಹಾಗೂ ಆತನ ಕುಟುಂಬದವರಿಗೆ ಮಾತ್ರ ಈ ಸವಲತ್ತು
- ವಿದ್ಯುತ್, ನೀರು ಇತರೆ ಬಿಲ್ಲುಗಳನ್ನು ಕಟ್ಟಲು, ಕೊನೆಯ ದಿನಾಂಕಕ್ಕೆ ಕನಿಷ್ಠ ಎರಡು ದಿನ ಮುನ್ನ ತಿಳಿಸಬೇಕು.
- ಬೇಡಿಕೆ ಸಲ್ಲಿಸಿದ ಒಂದು ದಿನದೊಳಗೆ ನಿಮ್ಮ ಮನೆಗೆ ಬಂದು, ಬಿಲ್ಲು ಮತ್ತು ಹಣವನ್ನು ಪಡೆಯಲಾಗುವುದು. ಮರುದಿನ ಹಣ ಕಟ್ಟಿ, ನಂತರದ 24 ಗಂಟೆಯಾಳಗೆ ನಿಮ್ಮ ಮನೆಗೆ ರಶೀತಿ ತಲುಪಿಸುತ್ತೇವೆ.
- ಕೆ.ಪಿಟಿಸಿಎಲ್, ಬಿಡಬ್ಲ್ಯುಎಸ್‌ಎಸ್‌ಬಿ, ಬಿಎಸ್‌ಎನ್‌ಎಲ್, ಕ್ರೆಡಿಟ್ ಕಾರ್ಡ್ಸ್, ಪೇಜರ್/ಮೊಬೈಲ್, ವಿಮಾ ಕಂತು, ಮನೆ ತೆರಿಗೆ, ಕ್ಲಬ್ ಸದಸ್ಯತ್ವ ಶುಲ್ಕ, ಶಾಲಾ ಶುಲ್ಕ ಈ ಎಲ್ಲಾ ಬಿಲ್ಲುಗಳನ್ನು ನಾವು ಕಟ್ಟಿ ಕೊಡುತ್ತೇವೆ.
- ಪ್ರಯಾಣ ಟಿಕೆಟ್‌ಗಳನ್ನು ಕಾದಿರಿಸಲು, ನೀವು ಪ್ರಯಾಣಿಸಬೇಕಾದ ಸಮಯಕ್ಕೆ ಕನಿಷ್ಠ 48 ತಾಸುಗಳ ಮುನ್ನ ನಮಗೆ ತಿಳಿಸಬೇಕು. ಟಿಕೇಟು ಸಿಗುತ್ತದೆ ಅಥವಾ ಇಲ್ಲ ಎಂಬುದನ್ನು ನೀವು ಬೇಡಿಕೆ ಸಲ್ಲಿಸಿದ ದಿನವೇ ಫೋನು ಅಥವಾ ಇ-ಮೇಲ್ ಮೂಲಕ ತಿಳಿಸುತ್ತೇವೆ. ಟಿಕೆಟುಗಳನ್ನು ಮರು ದಿನ ತಲುಪಿಸುತ್ತೇವೆ.
- ದಿನಾಂಕ ಅಥವಾ ಸಮಯ ಬದಲಿಸುವುದಾದಲ್ಲಿ, ಅದನ್ನು ಇನ್ನೊಂದು ಬೇಡಿಕೆಯಾಗಿ ಸ್ವೀಕರಿಸಲಾಗುವುದು.
- ಸಿನಿಮಾ ಟಿಕೆಟುಗಳನ್ನು ಆಟ ಶುರುವಾಗುವ ಕನಿಷ್ಠ 2 ತಾಸುಗಳ ಮುನ್ನ ತಲುಪಿಸುತ್ತೇವೆ. ಸರ್ಕಸ್ಸು/ಸಂಗೀತ/ನಾಟಕ/ಕ್ರೀಡೆ ಮುಂತಾದ ಕಾರ್ಯಕ್ರಮಗಳ ಟಿಕೇಟುಗಳನ್ನು ಪ್ರದರ್ಶನಕ್ಕೆ ಕನಿಷ್ಠ 4 ತಾಸುಗಳ ಮುಂಚೆ ನಿಮಗೆ ಕೊಡುತ್ತೇವೆ. ಆಯಾ ಸಂದರ್ಭಕ್ಕೆ ತಕ್ಕಂತೆ ಸೇವಾ ಶುಲ್ಕವನ್ನು ವಿಧಿಸಲಾಗುವುದು.
- ನೀವು ಬೇಡಿಕೆ ಸಲ್ಲಿಸಿದ 4 ತಾಸುಗಳಲ್ಲಿ (ಕಚೇರಿ ಅವಧಿಯಾಗಿರಬೇಕು) ಅಂಚೆ ಸೇವೆಗಳನ್ನು ಪೂರೈಸಲು ಸೂಪರ್‌ಸೇವಕ ನೀವು ಕೊಡುವ ವಿಳಾಸಕ್ಕೆ ಹಾಜರ್. ಹಣ ಹಾಗೂ ನೀವು ಕಳುಹಿಸಬೇಕಾದ ಪತ್ರ ವಗೈರೆಯನ್ನು ಇಸಿದುಕೊಂಡು ಕೆಲಸ ಮಾಡಿಕೊಡಲಾಗುವುದು.
- ಬ್ಯಾಂಕಿನ ಕೆಲಸದ ವಿಷಯದಲ್ಲೂ ಮೇಲೆ ಹೇಳಿದಂತೆಯೇ ಕೆಲಸ ಮಾಡಿಕೊಡಲಾಗುವುದು.
ಸೇವೆಯ ಲಾಭ ಪಡೆಯಲು ಈಗಲೇ ನೋಂದಾಯಿಸಿಕೊಳ್ಳಿ.
ಹೆಚ್ಚಿನ ವಿವರಗಳಿಗೆ http://iiseva./ ಕ್ಲಿಕ್ಕಿಸಿ
ಸಾಗರದಾಚೆಯಿರುವ ನೀವಿನ್ನು ತಳಮಳ ಬಿಡಿ. ಬೆಂಗಳೂರಿನಲ್ಲಿರುವ ನಿಮ್ಮವರಿಗೆ ಈ ಸೇವೆಯನ್ನು ದೀಪಾವಳಿ ಉಡುಗೊರೆಯಾಗಿ ಕೊಡಿ. ಇದನ್ನು ನಿಮ್ಮ ಮರೆಯದ ದೀಪಾವಳಿ ಆಗಿಸಿಕೊಳ್ಳಿ.
ಮುಖಪುಟ / ಲೋಕೋಭಿನ್ನರುಚಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications