ನ್ಯೂಯಾರ್ಕ್ನಲ್ಲಿ ವಿಮಾನ ದುರಂತಕ್ಕೆ 255 ಪ್ರಯಾಣಿಕರ ಬಲಿ
ವಾಷಿಂಗ್ಟನ್ : ಸೆಪ್ಟೆಂಬರ್ 11ರ ನ್ಯೂಯಾರ್ಕ್ ದುರಂತದ ನೋವು ಇನ್ನೂ ಹಸಿರಾಗಿರುವಾಗಲೇ 255 ಮಂದಿಯನ್ನು ಬಲಿ ತೆಗೆದುಕೊಂಡ ಅಮೆರಿಕಾದ ಏರ್ ಬಸ್ ಎ- 300 ವಿಮಾನ ದುರಂತ ಕೇವಲ ಅಪಘಾತವಷ್ಟೇ ಎಂದು ವೈಟ್ ಹೌಸ್ನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ- ಏರ್ ಲೈನ್ಸ್ನ ವಿಮಾನವು ನ್ಯೂಯಾರ್ಕ್ನ ಜಾನ್ ಎಫ್ ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ತೆಗೆದುಕೊಂಡ ಕೆಲವೇ ನಿಮಿಷಗಳಲ್ಲಿ ಈ ಅಪಘಾತ ಸಂಭವಿಸಿದೆ. 246 ಮಂದಿ ಪ್ರಯಾಣಿಕರು ಮತ್ತು 9 ಮಂದಿ ಸಿಬ್ಬಂದಿ ದುರ್ಘಟನೆಯಲ್ಲಿ ಮೃತರಾಗಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಕಾಕ್ ಪಿಟ್ನಲ್ಲಿ ಶಂಕಾಸ್ಪದವಾದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ವೈಟ್ ಹೌಸ್ನ ಬಾತ್ಮೀದಾರ ಅರಿ ಫ್ಲೈಶರ್ ಹೇಳಿದ್ದಾರೆ.
ರಾಕ್ವೇಯ ಜನವಸತಿ ಪ್ರದೇಶ ಮ್ಯಾನ್ ಹಟನ್ ಎದುರಿಗಿರುವ ನ್ಯೂಯಾರ್ಕ್ ಬೊರೊಫ್ ಆಫ್ ಕ್ವೀನ್ಸ್ ಗೆ ಅಪ್ಪಳಿಸಿದ ವಿಮಾನ ಕನಿಷ್ಠ ನಾಲ್ಕು ಕಟ್ಟಡಗಳನ್ನು ಸುಟ್ಟು ಹಾಕಿದೆ. ವಿಮಾನದ ಇಂಜಿನ್ ಒಂದು ಕಡೆ, ಮತ್ತೊಂದು ಕಡೆ ವಿಮಾನದ ಇತರ ಭಾಗಗಳು ಬಿದ್ದಿವೆ.
ವಿಮಾನ ಅಪಘಾತ ನಡೆದ ತಕ್ಷಣ ತನಿಖೆ ನಡೆಸಲು ರಾಷ್ಟ್ರೀಯ ಪ್ರವಾಸ ರಕ್ಷಣಾ ಮಂಡಳಿ(ಎನ್ಟಿಎಸ್ಬಿ) ಗೆ ಸೂಚಿಸಲಾಗ್ತಿತು. ಎನ್ಟಿಎಸ್ಬಿಗೆ ಈವರೆಗೆ ದೊರೆತ ಎಲ್ಲ ಮಾಹಿತಿಗಳ ಪ್ರಕಾರ ಈ ದುರಂತ ಒಂದು ಅಪಘಾತ ಎಂಬುದನ್ನೇ ಸಮರ್ಥಿಸುತ್ತದೆ ಎಂದು ಫ್ಲೈಶರ್ತಿಳಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications